ಇಂಡಿ

ಗುಡುಗು ಸಹಿತ ಭಾರಿ ಮಳೆ: ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ

ಗುಡುಗು ಸಹಿತ ಭಾರಿ ಮಳೆ: ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ

ಇಂಡಿ 01: ಸೋಮವಾರ ಸಾಯಂಕಾಲ ತಾಲೂಕಿನ ಇಂಗಳಗಿ, ಆಳೂರ, ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ  ಗುಡುಗು ಸಹಿತ ಗಾಳಿ ಬೀಸಿ ಅಕಾಲಿಕ ಮಳೆಯಾಗಿದ್ದು ಅನೇಕ ಗಿಡ-ಮರಗಳು ನೆಲಕ್ಕುರುಳಿ ರೈತನ ಮೇಲೆ ಮತ್ತೆ ಬರೆ ಎಳೆದಿದೆ.ಸೋಮವಾರ ಸಾಯಂಕಾಲ 6 ಘಂಟೆ ಸುಮಾರಿಗೆ ಪ್ರಾರಂಭವಾದ ಮಳೆ 7 ಘಂಟೆಯವರೆಗೂ ಸುರಿದಿದ್ದು ಜೋರಾಗಿ ಗಾಳಿ ಬೀಸಿದ ಪರಿಣಾಮ ಮಾವಿನ ಮರಗಳು, ಲಿಂಬೆ ಗಿಡಗಳು, ಬಾಳೆ ಸೇರಿದಂತೆ ಇನ್ನೀತರೆ ಬೆಳೆಗಳು ನೆಲಕ್ಕುರುಳಿ ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಹಾನಿಯಾಗಿವೆ.

ಮಾವಿನಕಾಯಿ, ಲಿಂಬೆ ಹಣ್ಣುಗಳು, ದಾಳಿಂಬೆ ಸೇರಿದಂತೆ ತೋಟಗಾರಿಕೆ ಇಲಾಖೆಯ ಅನೇಕ ಬೆಳೆಗಳು ನೆಲಕ್ಕುರುಳಿದ್ದು, ಕೊರೊನಾ ಕರಿಛಾಯೆಯ ನಡುವೆ ಅಕಾಲಿಕ ಮಳೆ ಮತ್ತೆ ರೈತನ ಮೇಲೆ ಬರೆ ಎಳೆದಿದೆ.ಇಲಾಖೆಯ ಸಿಬ್ಬಂದಿಗಳನ್ನು ಕಳಿಸಿ ಹಾನಿಯಾದ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ವರದಿ ಕಳಿಸಿ ಕೊಡಲಾಗುತ್ತದೆ.ಆರ್.ಟಿ. ಹಿರೇಮಠ ಹಿರಿಯ ನಿದರ್ೇಶಕ ತೋಟಗಾರಿಕೆ ಇಲಾಖೆ ಇಂಡಿ.ಸೋಮವಾರ ಸಾಯಂಕಾಲ ಭಾರೀ ಗಾಳಿ ಮತ್ತು ಮಳೆಗೆ ನಮ್ಮ 1 ಹೆಕ್ಟೇರ್ ಪ್ರದೇಶದ ಬಾಳೆ ಬೆಳೆ ನೆಲಕ್ಕುರುಳಿದೆ. ಬಾಳೆ ಫಸಲು ಬಂದಿದ್ದು ಎರಡು ದಿನದಲ್ಲಿ ಖರೀದಿ ಮಾಡಲು ಏಜೆಂಟರು ಬರುವುದಾಗಿ ಹೇಳಿದ್ದರು. ಆದರೆ ಗಾಳಿಗೆ ಎಲ್ಲ ಬಾಳೆ ನೆಲಕ್ಕುರುಳಿ ಹಾಳಾಗಿದೆ. ಸರಕಾರ ನಮ್ಮ ನೆರವಿಗೆ ಬರಬೇಕು.

ಸಂತೋಶ ಸೀತಿಮನಿ ಇಂಗಳಗಿ ಗ್ರಾಮದ ಬಾಳೆ ಬೆಳೆದ ರೈತ.ಅಕಾಲಿಕ ಗಾಳಿ ಮಳೆಗೆ ನಮ್ಮ ಲಿಂಬೆ ಗಿಡಗಳು ನೆಲಕ್ಕುರುಳಿವೆ. ನಮ್ಮವಷ್ಟೇ ಅಲ್ಲ ನಮ್ಮ ಗ್ರಾಮದಲ್ಲಿನ ಬಹುತೇಕ ರೈತರ ಲಿಂಬೆ ಗಿಡ ನೆಲಕ್ಕೆ ಬಿದ್ದಿವೆ. ಅಧಿಕಾರಿಗಳು ಸವರ್ೆ ಮಾಡಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು. ಅಶೋಕ ಬಳಬಟ್ಟಿ ಲಿಂಬೆ ಬೆಳೆದ ರೈತ ಇಂಗಳಗಿ. 


ಸುದ್ದಿ ಓದಿ