ತಾಲೂಕಿನಾದ್ಯಂತ ಭರ್ಜರಿ ಮಳೆ: ರೈತನ ಮೊಗದಲ್ಲಿ ಮಂದಹಾಸ
ಗೋಕಾಕ 14: ತಾಲೂಕಿನಾದ್ಯಂತ ಭರ್ಜರಿ ಮಳೆಯ ಹಿನ್ನಲೆ ಚರಂಡಿ ಹಾಗೂ ಹಳ್ಳಕೊಳ್ಳಗಳು ಹರಿಯುತ್ತಿದ್ದು ರಸ್ತೆಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಜರುಗಿವೆ.
ನಗರದ ಹೊರವಲಯದಲ್ಲಿರುವ ಅಡಿಬಟ್ಟಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ದೊಡ್ಡದಾದ ಗುಂಡಿ ಮಾರ್ಪಟಟಿದ್ದು, ಗುಂಡಿಯಲ್ಲಿ ಮಳೆ ನೀರು ಸೇರಿ, ಬೈಕ್ ಸವಾರರು ಕಣ್ಣತಪ್ಪಿ ಬೀಳುತ್ತಿದ್ದಾರೆ. ಈ ರಸ್ತೆಯ ಪಕ್ಕದಲ್ಲೆ ಇದ್ದ ಅನಾನಸ್ ಹಣ್ಣಿನ ವ್ಯಾಪಾರಿ ರಾಜು ಕುರುಬರ ಇವರ ಧರ್ಮಪತ್ನಿ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಗುಂಡಿಯಿರುವ ಸೂಚನೆ ನೀಡಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಹಣ್ಣಿನ ವ್ಯಾಪಾರಿ ದಂಪತಿಗಳು ತಗ್ಗು ಗುಂಡಿಗಳು ಮುಚ್ಚಿ ಮಾನವಿಯತೆ ಮೆರೆದಿದ್ದಾರೆ.
ಮಳೆಯ ನೀರೆಂದು ವಾಹನ ನೀರಿ ಗುಂಡಿಯಲ್ಲಿ ಇಳಿಸುವಾಗ ಏಚ್ಚರ ವಹಿಸಿ ಎಂದು ಮನವಿ ಮಾಡುತ್ತಿದ್ದಾರೆ. ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆಯಲ್ಲಿ ಮಾರ್ಪಟಟಿರುವ ತಗ್ಗು ಗುಂಡಿಗಳನ್ನು ಮುಚ್ಚಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ರೈತನ ಮೊಗದಲ್ಲಿ ಮಂದಹಾಸ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಹಿನ್ನಲೆ ಬಿತ್ತನೆ ಕಾರ್ಯ ಆರಂಭಿಸಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಿತ್ತನೆ ಮಾಡಿದ ಹೊಲ ಗದ್ದೆಗಳಲ್ಲಿ ಸಸಿಗಳು ಚಿಗುರೊಡೆದಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.