ಆರೋಗ್ಯವೇ ಭಾಗ್ಯ.ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ: ಕೊಟೆಣ್ಣನವರ
ಇಂಡಿ: ಪಟ್ಟಣದ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ದಾನಮ್ಮದೇವಿ ಪ್ರಥಮ ಜಾತ್ರಾ ಮಹೋತ್ಸವ ನಿಮಿತ್ಯ ಉಚಿತ ಆರೋಗ್ಯ ಶಿಬಿರವನ್ನು ವಿಜಯಪುರದ ಬಿಎಲ್ಡಿಈ ಡೀಮ್ಡ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಮಂಜುನಾಥ ಕೊಟೆಣ್ಣನವರ ನೇತೃತ್ವದಲ್ಲಿ ಏರಿ್ಡಸಲಾಗಿತ್ತು.
ಶಿಬಿರವನ್ನು ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ ಆರೋಗ್ಯವೇ ಭಾಗ್ಯ.ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲವೆಂದರು.
ಡಾ. ಮಂಜುನಾಥ ಕೊಟೆಣ್ಣನವರ ಬಿ.ಎಲ್.ಡಿ.ಈ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯ ವಿವರಿಸಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಅನೀಲಪ್ರಸಾದ ಏಳಗಿ, ತಜ್ಞ ವೈದ್ಯರಾದ ಡಾ. ಶ್ರೀಧರ ಪಾಟೀಲ,ಡಾ. ಪ್ರದೀಪ ಜಾಜು,ಡಾ. ಬಸವರಾಜ ಪಾಟೀಲ ಪಾಲ್ಗೊಂಡಿದ್ದರು.
200 ರೋಗಿಗಳನ್ನು ತಪಾಸಿಸಿ ಉಚಿತ ಓಷದ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ 60 ಜನರನ್ನು ವಿಜಯಪುರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಯಿತು.
ಜಾತ್ರಾ ಸಮಿತಿಯ ಡಾ. ಮಲ್ಲಿಕಾರ್ಜುನ ಬಿರಾದಾರ, ಕಾಸುಗೌಡ ಬಿರಾದಾರ, ಅರವಿಂದ ಹಂಜಗಿ, ಶಿವು ಬೀಳಗಿ,ಪ್ರದೀಪ ಮುರಗುಂಡಿ,ದಶರಥ ಕೋರಿ, ಸುರೇಶ ಅವರಾದಿ, ದಶರಥ ಕೋರಿ,ಬಾಬು ಬಿರಾದಾರ,ಶಿವು ಚಿಕ್ಕಬೇವನೂರ, ಬಸವರಾಜ ದೇವರ,ಮಲ್ಲು ಗುಡ್ಲ,ಷಹಾಜಿ ಶಹಾ ಮತ್ತಿತರಿದ್ದರು. ಡಾ. ಮಂಜುನಾಥ ಕೊಟೆಣ್ಣವರ ಇವರನ್ನು ಸನ್ಮಾನಿಸಲಾಯಿತು.