ಮಲೇರಿಯಾ ನಿಯಂತ್ರಣಕ್ಕೆ ಆರೋಗ್ಯ ಅರಿವು ಅಗತ್ಯ
ಗುಳೇದಗುಡ್ಡ 24: ಮಲೇರಿಯಾ ರೋಗವು ಅನಾಫೀಲಿಸ್ ಎಂಬ ಹೆಣ್ಣು ಸೊಳ್ಳೆಯ ಮೂಲಕ ಉತ್ಪತ್ತಿಯಾಗುತ್ತದೆ. ಈ ಸೊಳ್ಳೆಯು ಮನುಷ್ಯರಿಗೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸಾರ್ವಜನಿಕರಲ್ಲಿ ಆರೋಗ್ಯದ ಅರಿವಿನಿಂದ ಮಲೇರಿಯಾ ನಿಯಂತ್ರಣ ಸಾಧ್ಯವೆಂದು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ನಾಗರಾಜ ಕುರಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್-21 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅನಾಫಿಲೀಸ್ ಸೊಳ್ಳೆಯು ಮನೆಯ ಸುತ್ತಮುತ್ತ ನಿರುಪಯುಕ್ತ ಪ್ಲಾಸ್ಟಿಕ್, ತೆಂಗಿನ ಚಿಪ್ಪು, ಟೈರ್ ಹಾಗೂ ತಗ್ಗು ಗುಂಡಿಗಳಲ್ಲಿ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಮನೆಯ ಸದಸ್ಯರಿಗೆ ಜ್ವರ ಕಾಣಿಸಿಕೊಂಡರೆ ರಕ್ತ ತಪಾಸಣೆ ಮಾಡಿಸಿಕೊಂಡು ರೋಗದಿಂದ ಮುಕ್ತರಾಗಲು ಸಲಹೆ ನೀಡಿದರು.
ಡಾ. ಕವಿತಾ ಸಂಕ, ಡಾ.ಕೆ.ಟಿ.ಗಾಜಿ, ಆರೋಗ್ಯ ನೀರೀಕ್ಷಣಾಧಿಕಾರಿ ರಾಜಶೇಖರ ಸಾಳಗುಂದಿ, ಎಸ್.ಬಿ.ಹೊನ್ಯಾಳ, ಪ್ರಶಾಂತ ಕೆಲವಡಿ, ಶಂಕರ್ ವೈ.ಎಂ., ಸೌಮ್ಯ ನಂದಿಕೋಲಮಠ, ಜ್ಯೋತಿ ಮೆಣಸಿನಕಾಯಿ, ಪ್ರೀತಿ ಬೆಳಗಲ್, ಭಾರ್ಗವಿ, ದೇವರಾಜ ಲಮಾಣಿ, ಸೇರಿದಂತೆ ಇತರರು ಇದ್ದರು.