ಕಾಗವಾಡ

ಯೋಗಾ, ದೇಶಿ ಆಟ ಕಬ್ಬಡ್ಡಿಯಿಂದ ಆರೋಗ್ಯ ರಕ್ಷಣೆ

ಯೋಗಾ, ದೇಶಿ ಆಟ ಕಬ್ಬಡ್ಡಿಯಿಂದ ಆರೋಗ್ಯ ರಕ್ಷಣೆ

ಶ್ರೀನಿವಾಸ ಪಾಟೀಲ ಹೇಳಿಕೆ: ಹೊನಲು ಬೆಳಕಿನ ಎರಡು ದಿನಗಳ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ 

ಕಾಗವಾಡ 22: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಧಾವಂತ ಜೀವನ ನಡೆಸುತ್ತಿದ್ದಾರೆ. ಆದರೆ, ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಯೋಗಾ, ಭಾರತೀಯ ಆಟವಾದ ಕಬ್ಬಡ್ಡಿ ಆಟ ಆಡುವ ಮುಖಾಂತರ ಆರೋಗ್ಯ ಸ್ವಾಸ್ಥ್ಯ ಕಾಪಾಡಿಕೊಳ್ಳಿರಿಯೆಂದು ಬಿಜೆಪಿ ಯುವ ಮುಖಂಡರು ಹಾಗೂ ಅಥಣಿ ಸಕ್ಕರೆ ಕಾರ್ಖಾನೆ ಎಂ.ಡಿ ಶ್ರೀನಿವಾಸ ಪಾಟೀಲ ಯುವಕರಿಗೆ ಕರೆ ನೀಡಿದ್ದಾರೆ. 

ರವಿವಾರ ಮಧ್ಯಾಹ್ನ ಐನಾಪುರದ ಕೆ.ಆರ್‌.ಇ.ಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹೊನಲು ಬೆಳಕಿನ ಎರಡು ದಿನಗಳ ಕಬ್ಬಡ್ಡಿ ಪಂದ್ಯಾವಳಿಗೆ ಐನಾಪುರದ ಬಸವೇಶ್ವರ ಸ್ವಾಮಿಜಿ ಮತ್ತು ಬಬಲಾದಿ ಮಠದ ಸಿದ್ರಾಮೇಶ್ವರ ಅಜ್ಜನ್ನವರ ಇವರ ಸಾನಿಧ್ಯದಲ್ಲಿ ಶ್ರೀನಿವಾಸ ಪಾಟೀಲ ಇವರು ಸ್ಪರ್ಧೆಗಳು ಉದ್ಘಾಟಿಸಿ ಮಾತನಾಡಿದರು. 

ಶ್ರೀನಿವಾಸ ಪಾಟೀಲರ ರೈಡ್ ಮುಖಾಂತರ ಉದ್ಘಾಟನೆ: 

ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದ ಮರಿಸಿದ್ಧೇಶ್ವರ ಕ್ರೀಡಾ ಸಂಸ್ಥೆ, ಬೆಳಗಾವಿ ಜಿಲ್ಲಾ ಕಬ್ಬಡ್ಡಿ ಅಮೇಚ್ಯೂರ್ ಅಸೋಸಿಯೇಶನ್ ಇವರ ಸಹಯೋಗದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ಕಬ್ಬಡ್ಡಿ ಪಂದ್ಯಾವಳಿಯನ್ನು ಅಥಣಿ ಸಕ್ಕರೆ ಕಾರ್ಖಾನೆ ಎಂ.ಡಿ ಹಾಗೂ ಬಿಜೆಪಿ ಪಕ್ಷದ ಯುವ ಮುಖಂಡ ಶ್ರೀನಿವಾಸ ಶ್ರೀಮಂತ ಪಾಟೀಲ ಇವರು ಕಬ್ಬಡ್ಡಿ ರೈಡ್ ಮಾಡಿ ಪಂದ್ಯಗಳಿಗೆ ಉದ್ಘಾಟನೆ ನೆರವೇರಿಸಿದರು. 

ಸ್ಪರ್ಧೆಯಲ್ಲಿ 22 ತಂಡಗಳು: 

ಸ್ಪರ್ಧೆಯ ಸಂಯೋಜಕರಾದ ಪ್ರಶಾಂತ ಅಪರಾಜ ಇವರು ಮಾಹಿತಿ ನೀಡುವಾಗ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ 22 ತಂಡಗಳು ಸ್ಪರ್ಧಿಸಿವೆ. ಪ್ರಥಮ ಬಹುಮಾನ 33,333/- ರೂ. ಬಿಜೆಪಿ ಪಕ್ಷದ ಕಾಗವಾಡ ಮಂಡಳ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ ತಮ್ಮ ತಂದೆ ದಿವಂಗತ ಶಿವಗೌಡ ಪಾರಶೆಟ್ಟಿ ಇವರ ಸ್ಮರಣಾರ್ಥವಾಗಿ ನೀಡಿದ್ದಾರೆ. ದ್ವೀತಿಯ ಬಹುಮಾನ 22,222/- ರೂ. ಐನಾಪುರ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ನ್ಯಾಯವಾದಿ ಸಂಜಯ ಕುಚನೂರೆ ಇವರು ನೀಡಿದ್ದಾರೆ. ತೃತೀಯ ಬಹುಮಾನ 11,111, ರೂ. ಪ್ರಗತಿಪರ ರೈತ ಸುದರ್ಶನ ದಾದಾ ಜತ್ತೆನ್ನವರ ಮತ್ತು ಚತುರ್ಥ ಬಹುಮಾನ 9,999, ಪ್ರಗತಿಪರ ರೈತ ರಾಕೇಶ ಕಾರಚಿ ಇವರು ನೀಡಿದ್ದಾರೆ ಎಂದರು. 

ಅಥಣಿ ಸಕ್ಕರೆ ಕಾರ್ಖಾನೆ ಎಂ.ಡಿ ಹಾಗೂ ಬಿಜೆಪಿ ಪಕ್ಷದ ಯುವ ಮುಖಂಡ ಶ್ರೀನಿವಾಸ ಪಾಟೀಲ ಮತ್ತು ರಾಜೇಂದ್ರ ಪೋತದಾರ ಇವರು ಕಬ್ಬಡ್ಡಿ ಸ್ಪರ್ಧೆಯಲ್ಲಿ ಖುದ್ದಾಗಿ ರೈಡ್ ಮಾಡಿ ಯುವಕರಲ್ಲಿ ಪ್ರೋತ್ಸಾಹಣೆ ತುಂಬಿದರು. 

ಕೆ.ಆರ್‌.ಇ.ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ದಾದಾಗೌಡ ಪಾಟೀಲ, ಸಿದ್ಧೇಶ್ವರ ಪಿಕೆಪಿಎಸ್ ಅಧ್ಯಕ್ಷ ಪ್ರವೀಣ ಗಾಣಿಗೇರ, ಶಾಂತಿಸಾಗರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರುಣ ಗಾಣಿಗೇರ, ಅಶೋಕ ಗಾಣಿಗೇರ, ರಾಕೇಶ ಕಾರಚಿ, ಶ್ರೀಧರ ಜೋಶಿ, ಆದಿನಾಥ ದಾನೊಳ್ಳಿ, ಯೊಗೇಶ ಪೋತದಾರ, ನಿಂಗಪ್ಪಾ ಚೌಗುಲೆ, ಸುರೇಶ ಅಡಿಶೇರಿ, ಮರಿಸಿದ್ಧೇಶ್ವರ ಕ್ರೀಡಾ ಸಂಸ್ಥೆಯ ಸಂಚಾಲಕರಾದ ಆವೇಶ ಜಿರಗಾಳೆ, ಪ್ರವೀಣ ನಿರವಾಣಿ, ಗೋಕುಲ ಅಪರಾಜ, ನಿಕಲೇಶ ಕೋಳಿ, ಅಖಿಲೇಶ ಕೋಳಿ, ಶಿವಂ ಶಿಂಧೆ, ಪ್ರಜ್ವಲ ನಿರವಾಣಿ, ಮಹೇಶ ಭೋಸಲೆ, ಸೇರಿದಂತೆ ಅನೇಕರು ಇದ್ದರು. ನಿರ್ಣಾಯಕರಾದ ಎಸ್‌.ಆರ್‌.ಶಿರಗುಪ್ಪೆ ಇವರ ನೇತೃತ್ವದಲ್ಲಿ ಸ್ಪರ್ಧೆಗಳು ಜರುಗುತ್ತಿವೆ. 


ಸುದ್ದಿ ಓದಿ