ಇಂದಿನ ದಿನಮಾನದಲ್ಲಿ ಆರೋಗ್ಯ, ಶಿಕ್ಷಣ ತುಂಬಾ ಅವಶ್ಯಕ: ಶಾಸಕ ಶ್ರೀಮಂತ
ಕಾಗವಾಡ 17: ಇಂದಿನ ದಿನಮಾನದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಅವಶ್ಯಕತೆ ತುಂಬಾ ಇದೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ದಿ 17ರಂದು ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸನ್ 2018-19ನೇ ಸಾಲಿನ ಯೋಜನೆಯಡಿಯ 30ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸನ್2019 -20ನೇ ಸಾಲಿನ ನಬಾರ್ಡ ಆರ್ ಆಯ್.ಡಿ.ಎಫ ಯೋಜನೆ ಅಡಿಯಲ್ಲಿ 17ಲಕ್ಷ ರೂ ವೆಚ್ಚದಲ್ಲಿ ಮಂಜೂರಾದ ಅಂಗನವಾಡಿ ಕೇಂದ್ರ ಕಟ್ಟಡ, ಉಗಾರ - ಶಿರಗುಪ್ಪಿ 90 ಲಕ್ಷ ರೂ ರಸ್ತೆ ಡಾಂಬರಿಕರಣ, 70ಲಕ್ಷ ರೂ. ಬಾಹುಬಲಿ ಸ್ಕಿಂ ಕೆರೆಗೆ ಹೋಗುವ ರಸ್ತೆ ಸುಧಾರಣೆ, 10 ಲಕ್ಷ ರೂ ಶಿರಗುಪ್ಪಿ-ಉಗಾರ ಬಸವಣ್ಣ ದೇವಸ್ಥಾನ ರಸ್ತೆ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣವಂತರನ್ನಾಗಿ ರೂಪಿಸಬೇಕಾಗಿದೆ ಎಂದರು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಉಜ್ವಲಾ ಮಗದುಮ್ ವಹಿಸಿದ್ದರು.
ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್.ಮುಂಜೆ, ಗ್ರಾಪಂ ಅಧಕ್ಷ ಅಪರ್ಣಾ ಪಾಟೀಲ, ಪಿಡಿಒ ಶೈಲಜಾ ಭಜಂತ್ರಿ ,ಮುಖಂಡರಾದ ರಾಮಗೌಡ ಪಾಟೀಲ, ಅಭಯಕುಮಾರ ಅಕಿವಾಟೆ, ಸಂತೋಷ ಪಾಟೀಲ, ಅಕ್ಷಯ ಪಾಟೀಲ, ಭಮಣ್ಣಾ ಚೌಗಲಾ, ಮಹಾವೀರ ಕಾತ್ರಾಳೆ, ಪ್ರಕಾಶ ಡಂಗ, ಮನೋಜ ವಡ್ಡರ ಇತರರು ಇದ್ದರು