ಸಿಂಧಗಿ

ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ

ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ

ಸಿಂದಗಿ 26: ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿದ ರಾಸಾಯನಶಾಸ್ತ್ರ ಉಪನ್ಯಾಸಕ ಮಹಾಂತೇಶ ಹಿಪ್ಪರಗಿ ಹಾಗೂ ಗಣಿತಶಾಸ್ತ್ರ ಉಪನ್ಯಾಸಕ ಕಿಶನರಾವ್ ಕುಲಕರ್ಣಿ ಮಾತನಾಡಿ, ವೃತ್ತಿ ಜೀವನದ ಅನುಭವ ಅಪಾರವಾದುದು. ಇದು ಕಲಿಕಾ ಕೇಂದ್ರದ ಜೊತೆಗೆ, ತಾನು ಇಲ್ಲಿಂದ ಕಲಿತ ವಿಚಾರಗಳು ಹತ್ತು ಹಲವಾರು. ಶಿಕ್ಷಕರು ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುವ ರೀತಿ,ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಎನ್ ಆರ್ ಗಂಗನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಿ.ಎಸ್ ಮೋರಟಗಿ, ಬಿ.ಎನ್ ಬಿರಾದಾರ, ಎಮ್.ಎಮ್ ಯಾಳಗಿ, ಎಸ್.ಎಸ್.ಸುರಪೂರ ಸೇರಿದಂತೆ ಎಲ್ಲ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಇದ್ದರು.

ಅನಿಲಕೂಮಾರ ರಜಪೂತ ಸ್ವಾಗತಿಸಿದರು.ರಾಘವೆಂದ್ರ ಭಜಂತ್ರಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ