ಶಿಗ್ಗಾವ್

ನಮ್ಮನ್ನು ಸಮಾಜ ಸೇವೆ ಮಾಡುವಂತೆ ಪ್ರೇರೆಪಿಸಿದ್ದಾರೆ : ಸುರೇಶ ಯಲಿಗಾರ

ನಮ್ಮನ್ನು ಸಮಾಜ ಸೇವೆ ಮಾಡುವಂತೆ ಪ್ರೇರೆಪಿಸಿದ್ದಾರೆ : ಸುರೇಶ ಯಲಿಗಾರ

ಶಿಗ್ಗಾವಿ 30: ನಾನು ಕಲೆತ ಶಾಲೆಯಲ್ಲಿ ಕಲೆಯುತ್ತಿರುವ ಮಕ್ಕಳಿಗೆ ಕೊರತೆ ಇರುವ ಮೂಲ ಸೌಕರ್ಯಗಳನ್ನು ಒದಗಿಸಿ ಅವರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ  ಉತ್ತಮವಾದ ಪ್ರಜೆಗಳನ್ನಾಗಿ ರೂಪಿಸುವ ಉದ್ದೇಶದಿಂದ ಶಿಕ್ಷಕರ ಮಾರ್ಗದರ್ಶನದಲ್ಲಿ ಸಹಾಯ ಮಾಡುತ್ತಿದ್ದೇನೆ ಎಂದು ಮಾತೋಶ್ರಿ ಅನಸೂಯಾ ಪಕ್ಕೀರಾ​‍್ಪ ಯಲಿಗಾರ ಸೇವಾಸಂಸ್ಥೆಯ ಅಧ್ಯಕ್ಷ ಸುರೇಶ ಯಲಿಗಾರ ಹೇಳಿದರು. 

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ2 ದಲ್ಲಿ ಆಯೋಜಿಸಲಾಗಿದ್ದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ದಿವಂಗತ ತಂದೆ ಪಕ್ಕೀರಾ​‍್ಪ ತಾಯಿ ಅನಸೂಯಾ ಅವರು ಸಮಾಜಮುಖಿಯಾಗಿ ಜೀವಿಸಿ ನಮ್ಮನ್ನು ಸಮಾಜ ಸೇವೆ ಮಾಡುವಂತೆ ಪ್ರೇರೆಪಿಸಿದ್ದಾರೆ, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವುದಾಗಿ ಅವರು ತಿಳಿಸಿದರು. 

ಓಬಿಸಿ ಮೂರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಸ ಚೌವ್ಹಾಣ ಮಾತನಾಡಿ, ಸುರೇಶ ಯಲಿಗಾರ ಅವರು ಕಳೆದ ಮೂರು ನಾಲ್ಕು ವರ್ಷಗಳಿಂದ ತಮ್ಮ ತಂದೆ ತಾಯಿಯರ ಹೆಸರಿನಲ್ಲಿ ಮಾಡುತ್ತಿರುವ ಸಮಾಜ ಸೇವೆಯ ಕಿಚ್ಚು ಹೆಮ್ಮರವಾಗಿ ಬೆಳೆಯಲಿದ್ದು ಕೆಳವರ್ಗದ ಸಮಾಜಕ್ಕೆ ಆಸರೆಯಾಗಲಿದೆ, ತಾವು ಸಹ ಈ ಶಾಲೆಯ ವಿದ್ಯಾರ್ಥಿಯಾಗಿರುವುದರಿಂದ ಶಾಲೆಯ ಅಭಿವೃದ್ದಿಗಾಗಿ ಶ್ರಮಿಸುತ್ತಾ ಬಂದಿದ್ದು, ಇಂತ ದಾನಿಗಳಿಂದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸಮಾನವಾಗಿ ಬೆಳದು ನಿಲ್ಲುತ್ತವೆ ಎಂದರು 

ಸಹ ದಾನಿಗಳಾದ ಮಾಲತೇಶ ಗೌಳಿ, ಮುಕ್ತಿಯಾರ ತಿಮ್ಮಾಪುರ, ಮಾತನಾಡಿದರು. ಶಾಲೆಯ ಎಸ್‌.ಡಿ.ಎಂ.ಸಿ ಸದಸ್ಯರು, ಶಕ್ಷಕರು ದಾನಿಗಳನ್ನು ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಪ್ರಶಾಂತ ಪಾಟೀಲ, ಸುನಿಲ ಸುಣಗಾರ, ಪ್ರಶಾಂತ ಬಡ್ಡಿ, ಮಂಜುನಾಥ ಕೋಡಿ, ನಾಗರಾಜ ಬಡಿಗೇರ, ಮುಖ್ಯೋಪಾಧ್ಯಾಯಿನಿ ಆರ್‌.ಎಚ್‌.ಕೊಪ್ಪ, ಜಾನಕಿ, ಬಿ.ಎನ್‌.ರಜಪೂತ, ಡಿ.ಆರ್‌.ಅರೆಗಂಜಿ, ರೇಣುಕಾ ಮುರ್ಲಾಪುರ, ವಿನಾಯಕ ಸಿ.ಕೆ, ಬಸವಂತಪ್ಪಾ ಬೈಲವಾಳ, ಸುಮಾ ಆರ್ ಇತರರಿದ್ದರು 


ಸುದ್ದಿ ಓದಿ