ಜಾರಕಿಹೊಳಿ ಅವರು ಚಿಂತಿಸುವ ಅಗತ್ಯವಿಲ್ಲ ನಿಮ್ಮೊಂದಿಗೆ ನಾವಿದ್ದಿವಿ: ಋಷಿಕುಮಾರ ಶ್ರೀ
ಗೋಕಾಕ: ಎರಡೇ ತಿಂಗಳಲ್ಲಿ ಸಿಎಮ್ ಯಡಿಯೂರಪ್ಪನವರು ಮತ್ತೆ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ. ರಮೇಶ ಜಾರಕಿಹೊಳಿ ಅವರು ಚಿಂತಿಸುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದಿವಿ ಎಂದು ಕಾಳಿಮಠದ ಋಷಿಕುಮಾರ ಶ್ರೀ ಹೇಳಿದರು.ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಂದಿಗೆ ಮಾತನಾಡಿದರು. ವಯಕ್ತಿಕ ವಿಚಾರಗಳನ್ನು ತಂದು ಇನ್ನೊಬ್ಬರ ತೇಜೋವಧೆ ಮಾಡುತ್ತೆವೆ ಎಂಬುದು ಅವರ ಭ್ರಮೆ, ಇನ್ನೊಬ್ಬರ ತೇಜೋವಧೆ ಮಾಡಲು ಸಂಚು ರೂಪಿಸುವವರದ್ದೇ ತೇಜೋವಧೆ ಯಾಗುತ್ತದೆಂದು ತಿಳಿಸಿದರು. ಗೋಕಾಕ ಮತಕ್ಷೇತ್ರದಲ್ಲಿ ಮೂರು ದಿನಗಳಿಂದ ಸಂಚರಿಸಿದ್ದಿನಿ, ಮತದಾರರಿಗೆ ರಮೇಶ ಜಾರಕಿಹೊಳಿ ಅವರು ಮಾಡುವ ಅಭಿವೃದ್ಧಿ ಕಾರ್ಯಗಳು ಬೇಕಿದೆ. ಅವರ ವೈಯಕ್ತಿಕ ವಿಚಾರಗಳು ಬೇಕಿಲ್ಲ. ರಮೇಶ ಅವರು ತೆಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಮತದಾರರು ನಿಮ್ಮ ಪರವಾಗಿದ್ದಾರೆ. ನಾವು ನಿಮ್ಮೊಂದಿಗಿದ್ದೆವೆ ಎಂದರು.