ಹಾವೇರಿ ಲೋಕಸಭಾ ಚುನಾವಣೆ: ಮಂಜುನಾಥ್ ಗೌಡ ಶಿವಣ್ಣನವರ ಚರ್ಚೆ
ರಾಣೇಬೆನ್ನೂರು 11: ರಾಜಧಾನಿ ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ,ಪಕ್ಷದ ಪ್ರಮುಖ ಮುಖಂಡರ, ಮಹತ್ವಪೂರ್ಣ ಸಭೆ ನಡೆಯಿತು. ಜೆಡಿಎಸ್ ವರಿಷ್ಠರ ಸಭೆ ನಡೆಯುವ ಪೂರ್ವಭಾವಿಯಾಗಿ ರಾಣೇಬೆನ್ನೂರು ನಗರದ ಜೆಡಿಎಸ್ ಯುವ ಮುಖಂಡ ಮಂಜುನಾಥ ಗೌಡಶಿವಣ್ಣನವರ ಅವರು,ಜೆಡಿಎಸ್ ಮಾಜಿ ಮಂತ್ರಿ ಬಂಡೆಪ್ಪ ಕಾಶಂಪುರ್ ಅವರನ್ನು ಭೇಟಿಯಾಗಿ, ಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಾವೇರಿ ಲೋಕಸಭಾ ಚುನಾವಣೆ ಕುರಿತಂತೆ ಸುಧೀರ್ಘವಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಆಯಾ ಜಿಲ್ಲೆಯ ಪ್ರಮುಖ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.