ಹೂವಿನ ಹಡಗಲಿ

ವರ್ತಮಾನದ ಕಠಿಣ ಶ್ರಮ ಉತ್ತಮ ಭವಿಷ್ಯ ನಿರ್ಮಾಣ: ಎಸ್ ಎಸ್ ಪಾಟೀಲ್

ವರ್ತಮಾನದ ಕಠಿಣ ಶ್ರಮ ಉತ್ತಮ ಭವಿಷ್ಯ ನಿರ್ಮಾಣ: ಎಸ್ ಎಸ್ ಪಾಟೀಲ್

ಹೂವಿನಹಡಗಲಿ 11: ವರ್ತಮಾನದಲ್ಲಿ ಪಡುವ ಕಠಿಣ ಪರಿಶ್ರಮವು ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ ಸದಸ್ಯ ಹಾಗೂ ಜಿ ಬಿ ಆರ್ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್‌. ಎಸ್ ಪಾಟೀಲ್ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಇಂಗ್ಲಿಷ್ ಉಪನ್ಯಾಸಕರ ವೇದಿಕೆ,  ತಾಲೂಕು ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ  ತಾಲೂಕಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಇಂಗ್ಲಿಷ್ ಬೂಸ್ಟರ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

ಪಿಯುಸಿ ಹಂತವು ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು,  ಜಿಲ್ಲೆಯ ಫಲಿತಾಂಶವನ್ನು ಈ ಬಾರಿ ಉತ್ತಮಗೊಳಿಸಬೇಕಿದೆ ಆ ನಿಟ್ಟಿನಲ್ಲಿ ಇಂಗ್ಲಿಷ್ ಫಲಿತಾಂಶ ಸುಧಾರಣೆಗೆ ಈ ಕಾರ್ಯಾಗಾರಗಳು ಅನುಕೂಲವಾಗಲಿವೆ ಎಂದರು.  

ಜಿಲ್ಲಾ ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ಕೋರಿ ಹಾಲೇಶ್, ಉಪನ್ಯಾಸಕರ ಸಂಘದ ಅಧ್ಯಕ್ಷ ಬಸೆಟ್ಟಿ ಪ್ರಕಾಶ್ ಮಾತನಾಡಿದರು. ಜಿಲ್ಲಾ ಇಂಗ್ಲಿಷ್ ಉಪನ್ಯಾಸಕರ ಸಂಘದ ಉಪಾಧ್ಯಕ್ಷ, ಪ್ರಾಚಾರ್ಯ ಎ. ಕೊಟ್ರಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು  

ಪ್ರಾಚಾರ್ಯರಾದ ಸಿದ್ದಪ್ಪ ಕೂಕನಪಳ್ಳಿ, ಅಮರೇಗೌಡ ಪಾಟೀಲ್ ಕಲ್ಲನಗೌಡರ ಪ್ರಕಾಶ್, ಉಪನ್ಯಾಸಕರಾದ ವಿರೂಪಾಕ್ಷಪ್ಪ ಬಡಿಗೇರ್, ಎಂ. ಶಿವಪ್ಪ, ರೇವಣಸಿದ್ಧಪ್ಪ ಉಪಸ್ಥಿತರಿದ್ದರು.  

ಉಪನ್ಯಾಸಕರಾದ ನಾಗರಾಜ ಹಳ್ಳಿಕಟ್ಟಿ, ಪರಶುರಾಮ ನಾಗೋಜಿ ಕಾರ್ಯಕ್ರಮ ನಿರ್ವಹಿಸಿದರು. ಹೂವಿನಹಡಗಲಿ ತಾಲೂಕಿನ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಅನುಕೂಲ ಪಡೆದರು 


ಸುದ್ದಿ ಓದಿ