ಜಮಖಂಡಿ

ಸಾಲ ವಸೂಲಾತಿ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ: ಪ್ರತಿಭಟನೆ

ಸಾಲ ವಸೂಲಾತಿ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ: ಪ್ರತಿಭಟನೆ

ಜಮಖಂಡಿ 19: ಮೈಕ್ರೋ ಫೈನಾನ್ಸ್‌ ಹಾಗೂ ವಿವಿಧ ಬ್ಯಾಂಕ್‌ಗಳ ಸಿಬ್ಬಂದಿಗಳು ಸಾಲ ವಸೂಲಾತಿ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ, ದಬ್ಬಾಳಿಕೆ, ಹೊಡೆಯುವದು, ಅವ್ಯಾಚಪದಗಳನ್ನು ಬಳಸಿ ನಿಂದಿಸುತ್ತಿದ್ದಾರೆಂದು ಆರೋಪಿಸಿ. ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ. ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು. 

ನಗರದ ಮೋಮಿನ ಗಲ್ಲಿಯಿಂದ ಪಾದಯಾತ್ರೆಯ ಮೂಲಕ ನೂರಾರು ಮಹಿಳೆಯರು ಪ್ರಮುಖ ರಸ್ತೆಯ ಮೂಲಕ ಸಂಚರಿಸಿ, ಎ,ಜಿ,ದೇಸಾಯಿ ಸರ್ಕಲ್‌ನಲ್ಲಿ ಜಮಾಯಿಸಿ. ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸಿದರು. ನಂತರ ಎಎಸ್‌ಐ, ಸುರೇಶ ನಾಯಕ ಅವರ ಮೂಲಕ ಮೇಲಾಧಿಕಾರಿ ಸಿಪಿಐ ಅವರಿಗೆ ಮನವಿ ಸಲಿಸಿದರು. 

ನಂತರ ಕಾಂಗ್ರೇಸ್ ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿ ರಫೀಕ ಬಾರಿಗಡ್ಡಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ಸಂಸಾರಿಕ ಅಡಚನೆಗಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಮದುವೆಗಾಗಿ ಸಾಲವನ್ನು ಪಡೆದುಕೊಂಡಿರುತ್ತಾರೆ. ಪ್ರತಿ ತಿಂಗಳು ಸಾಲವನ್ನು ಮರು ಪಾವತಿಯನ್ನು ಮಾಡುತ್ತಾ ಬಂದಿರುತ್ತಾರೆ. ಆದರೆ ಕೆಲವಂದಿಷ್ಟು ಮನೆಯಲ್ಲಿನ ತೊಂದರೆಯಿಂದ ಸಾಲವನ್ನು ಮರು ಪಾವತಿ ಮಾಡುವದು ನಿಗಧಿತ ದಿನಾಂಕದಂದು ತುಂಬದೆ ಇರುವ ಸಮಯದಲ್ಲಿ ವಸೂಲಾತಿಗೆ ಬಂದ ಮೈಕ್ರೋ ಫೈನಾನ್ಸ್‌ ಸಿಬ್ಬಂದಿಗಳು ಮನೆಯಲ್ಲಿ ಪುರುಷರು ಇಲ್ಲದ ಸಮಯಕ್ಕೆ ಬಂದು ಅವ್ಯಾಚಪದಳನ್ನು ಬಳಸಿ, ಅವರ ಮೇಲೆ ಹೊಡೆಯುವದು, ದಬ್ಬಾಳಿಕೆ ಮಾಡುವದು, ಮನೆಯಲ್ಲಿ ಇರುವ ವಸ್ತುಗಳನ್ನು ಹಾಗೂ ಮೋಬೈಗಳನ್ನು ಕಸಿದುಕೊಳ್ಳುವದು. ಹೀಗೆ ರಾತ್ರಿ ಹೊತ್ತಿನಲ್ಲಿ ಬಂದು ಬಾಗಿಲಿನಲ್ಲಿ ಕುಳಿತು ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು. 

ಸಾಲ ಪಡೆದುಕೊಂಡ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿ. ಮಹಿಳೆಯರಿಗೆ ಬೈಕ್ ಮೇಲೆ ಕುಳಿತುಕ್ಕೊ ಎಂದು ಒತ್ತಾಯಿಸಿ. ನಮ್ಮ ಮೇಲಾಧಿಕಾರಿಗಳಿಗೆ ಭೇಟಿ ನೀಡಿ ಎಂದು ಒತ್ತಾಯಿಸಿ ಬೈಕ್ ಕುಳಿತಿಸಿಕೊಳ್ಳುತ್ತಾರೆ. ಹೀಗೆ ರಾತ್ರಿ ಸಮಯದಲ್ಲಿ ಸಹ ಬಂದು ಕಿರಿಕಿರಿ ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ ಸಿಬ್ಬಂದಿಗಳ ಮೇಲೆ ಹಾಗೂ ಇತರೆ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಮಹಿಳೆಯರಿಗೆ ರಕ್ಷಣೆಯನ್ನು ನೀಡಬೇಕೆಂದು ಪೋಲಿಸ್ ಇಲಾಖೆಗೆ ಒತ್ತಾಯಿಸಿದರು. 

ಇದೇ ಸಂದರ್ಭದಲ್ಲಿ ವಕೀಲ ಶಶಿಕಾಂತ ದೊಡಮನಿ ಮಾತನಾಡಿದರು, ನೂರಜಹಾನ ಪಠಾಣ, ಶಭಾನಾ ರಫೀಕ ಖಲೀಪಾ, ರುಕ್ಸಾನಾ ಮೈಹಬೂಬ ಪಟೇಲ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 


ಸುದ್ದಿ ಓದಿ