ಹರ್ ಘರ್ ತಿರಂಗಾ ಅಭಿಯಾನ್ ಕಾರ್ಯಕ್ರಮ : ತಹಶೀಲ್ದಾರ ನೇತೃತ್ವದಲ್ಲಿ ಸಭೆ
ಲೋಕದರ್ಶನ ವರದಿ
ಯರಗಟ್ಟಿ 31: ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ್ ಕಾರ್ಯಕ್ರಮವನ್ನು ತಹಶೀಲ್ದಾರ ನೇತೃತ್ವದಲ್ಲಿ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಭೆ ನಡೆಸಲಾಯಿತು.
ಎಮ್. ಎನ್. ಮಠದ ಇವರ ನೇತೃತ್ವದಲ್ಲಿ ಬರುವ 75 ನೇ ಸ್ವಾತಂತ್ರ ದಿನಾಚರಣೆಯನ್ನು ದೇಶಾದ್ಯಂತ ಭಾರತದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ.
ಈ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ 2022 ರ ಆಗಸ್ಟ್ 11 ರಿಂದ 17 ರವರೆಗೆ ದೇಶದ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿ ಅಭಿಯಾನ ಹಮ್ಮಿಕೊಂಡಿದೆ.
ಹರ್ ಘರ್ ತಿರಂಗಾ ಅಭಿಯಾನವನ್ನು ರಾಜ್ಯ ಸರ್ಕಾರದ ಸರ್ಕಾರಿ ನಾಗರಿಕ ಸಂಸ್ಥೆಗಳು ಇತರೆ ಎಲ್ಲಾ ಸಿಬ್ಬಂದಿಗಳು ಭಾಗವಹಿಸಬೇಕೆಂದು ಮುಖ್ಯ ಸರ್ಕಾರದ ನಿಯಮ ಕಡ್ಡಾಯವಾಗಿದೆ ಹಾಗೂ ತಾಲೂಕಾ ಆಡಳಿತ ಮತ್ತು ಸಾರ್ವಜನಿಕ ಸಹಯೋಗದಲ್ಲಿ ಎಂ. ಜಿ. ರಸ್ತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಶೀಲ್ದಾರಾದ ಎಮ್. ಎನ್. ಮಠದ ಹೇಳಿದ್ದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಬಿ. ಬಿ. ಗೋರೋಶಿ, ಪಟ್ಟಣ ಪಂಚಾಯತ ನಾಮನಿರ್ದೇಶನ ಸದಸ್ಯರಾದ ಅಜೀತಕುಮಾರ ದೇಸಾಯಿ, ವಿಶಾಲಗೌಡ ಪಾಟೀಲ, ಮಹಾಂತೇಶ ಜಕಾತಿ, ಡಾ. ಬುವನೇಶ್ವರಿ ಬಳ್ಳೂರು, ಯರಗಟ್ಟಿ ಬಾಲಕಿಯರ ವಸತಿ ನಿಲಯ ಪಾಲಕರಾ ಆಶಾ ಪರೀಟ, ಹೆಸ್ಕಾಂ ಅಧಿಕಾರಿ ಮಂಜುನಾಥ ಕುಂಬಾರ, ಗ್ರಾಮ ಲೆಕ್ಕಾಧಿಕಾರಿ ಎಲ್. ಬಿ. ದಳವಾಯಿ, ಆರ್. ಎಲ್. ಜೂಗನ್ನವರ, ಎಸ್. ಎಸ್. ಕುರುಬಗಟ್ಟಿಮಠ, ಸದಾಶಿವ ದೊಡ್ಡಮನಿ, ರಾಜೇಂದ್ರ ವಾಲಿ, ಮಾಜಿ ಸೈನಿಕರಾದ ಕುಮಾರ ಹಿರೇಮಠ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಪಶು ವೈದ್ಯಕೀಯ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ ಶಿಕ್ಷಕರು, ಕಾಲೇಜು ಪ್ರಾಂಶುಪಾಲರು ಉಪಸ್ಥಿತರಿದ್ದರು