ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಹನುಮ ಜಯಂತಿ, ತೊಟ್ಟಿಲೋತ್ಸವ
ರಾಣೇಬೆನ್ನೂರ 9: ಸಮಾಜ ಸಂಘಟನೆ ಮತ್ತು ಬೆಳವಣಿಗೆ ಇಂದಿನ ಕಾಲಮಾನದಲ್ಲಿ ಬಹು ಅಗತ್ಯವಿದೆ ಎಂದು ಸಮಾಜದ ಅಧ್ಯಕ್ಷ ನಾಗರಾಜ ಅಗಡಿ ಹೇಳಿದರು. ಅವರು ಇಲ್ಲಿನ ಶಿದ್ದೇಶ್ವರ ನಗರದ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ದವನದ ಹುಣ್ಣಿಮೆ ಪ್ರಯುಕ್ತ ಆಯೋಜಿಸಲಾಗಿದ್ದ ಹನುಮ ಜಯಂತೋತ್ಸವ, ಹನುಮ ತೊಟ್ಟಿಲೋತ್ಸವ, ಮತ್ತು ಮಿನಿ ಸಭಾಭವನ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾನತೆ ಸಾಧನೆಯಾಗಬೇಕು ಅದಕ್ಕೆ ಸರ್ವರ ಸಹಕಾರ ಅಗತ್ಯ ಅಭಿವೃದ್ಧಿ ಕಾರ್ಯಗಳ ಕುರಿತು ನಿರಂತರ ಚಿಂತನೆ ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು. ಲೋಕಕಲ್ಯಾಣೋತ್ಸವದ ಅಂಗವಾಗಿ ಏರಿ್ಡಸಿದ್ದ ಸ್ವಾಮಿ ಸತ್ಯನಾರಾಯಣ ಪೂಜೆಯನ್ನು ಸಮಾಜದ ಉಪಾಧ್ಯಕ್ಷ ಹನುಮಂತಪ್ಪ ಟಿ ಮುಕ್ತೇನಹಳ್ಳಿ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಧಾರ್ಮಿಕ ಕಾರ್ಯಕ್ರಮಕ್ಕೆ ಮುನ್ನ ಶ್ರೀ ಮಾರ್ಕಂಡೇಶ್ವರ ಆಂಜನೇಯ ಸ್ವಾಮಿಗೆ ಪಂಚಾಮೃತಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಕರಬಸಪ್ಪ ಹಳ್ಳಳ್ಳಿ ಶಂಕರಣ್ಣ ಗರಡಿ ಮನಿ,, ಲಕ್ಷ್ಮಣ ಕಡ್ಲಿಬಾಳ, ಎಲ್ಲಪ್ಪ ಗುತ್ತಲ್, ಪರಶುರಾಮ ಅಗಡಿ,ಮಹಿಳೆಯರು ಂಯುವಕರು ನೆರೆವೇರಿಸಲಾಯಿತುಕಾರ್ಯಕ್ರಮದ ಶಂಕ್ರಣ್ಣ ಗರಡಿಮನಿ ಹಳ್ಳಳ್ಳಿ ಶಂಕ್ರಣ್ಣ ಗರಡಿಮನಿ, ಲಕ್ಷಣ ಕಡ್ಲಿಬಾಳ,ಎಲ್ಲಪ್ಪ ಗುತ್ತಲ, ಪರಶುರಾಮ ಅಗಡಿ, ನೀಲಪ್ಪ.ಕುಮಾರೆಪ್ಪನವರ, ಬಸವರಾಜ ಐರಣಿ, ಮಾರುತಿ ಗರಡಿಮನಿ,ರವಿ ಕಿಚಡಿ, ನಾಗರಾಜ ಧೇವರಗುಡ್ಡ,ಶಿವಣ್ಣ ಬಡೆಂಕಲ, ಮಂಜುನಾಥ ಹುಬ್ಬಳ್ಳಿ, ಪ್ರವೀಣ.ಗುತ್ತೂರು ವೀರಯ್ಯ ಗುತ್ತಲ, ಚನ್ನಬಸಮ್ಮ, ಪ್ರೇಮಾ,ರಾಧಮ್ಮ,ಅರುಂದತಿ, ನಿರುಪಮಾ,ಶಿಲ್ಪಾ,ಪುಷ್ಪಾ, ಸೇರಿದಂತೆ ಸಮಾಜದ ಮತ್ತಿತರ ಗಣ್ಯರು, ಮುಖಂಡರು ಹಿರಿಯರು ಪಾಲ್ಗೊಂಡಿದ್ದರು