ಬೈಲಹೊಂಗಲ

ಹಣಬರಹಟ್ಟಿ ಗ್ರಾಮ ದಿ.31 ವರೆಗೆ ಸೀಲ್‌ಡೌನ್

ಹಣಬರಹಟ್ಟಿ ಗ್ರಾಮ ದಿ.31 ವರೆಗೆ ಸೀಲ್‌ಡೌನ್
ಹಣಬರಹಟ್ಟಿ ಗ್ರಾಮದಲ್ಲಿ ದಿ.31 ರ ವರೆಗೆ ಸಿಲ್‌ಡೌನ್ ಮಾಡುವ ಕುರಿತು ನಡೆದ ಸಭೆಯಲ್ಲಿ ತಹಶೀಲ್ದಾರ ಬಸವರಾಜ ನ

ಬೈಲಹೊಂಗಲ 25: ಕರೋನಾ ನಿಯಂತ್ರಣಕ್ಕಾಗಿ ದಿ.31 ರವರೆಗೆ ತಾಲೂಕಿನ ಹಣಬರಹಟ್ಟಿ ಗ್ರಾಮವನ್ನು ಸೀಲ್ ಡೌನ್ ಮಾಡಲು ತಹಶೀಲ್ದಾರ ಬಸವರಾಜ ನಾಗರಾಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. 

ತಹಶೀಲ್ದಾರ ಬಸವರಾಜ ನಾಗರಾಳ ಮಾತನಾಡಿ, ಹಣಬರಹಟ್ಟಿ ಗ್ರಾಮದಲ್ಲಿ ಕರೋನಾ ನಿಯಂತ್ರಣಕ್ಕೆ ಬರದ ಕಾರಣ ದಿ. 31 ರವರೆಗೆ ಸೀಲ್ ಡೌನ್ ಮಾಡಲು ಗ್ರಾ.ಪಂ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.ಕಿರಾಣಿ, ಕಾಯಿಪಲ್ಲೆ ಅಂಗಡಿ ತೆರೆಯಬಾರದು. ಲಸಿಕೆ ಪಡೆದರೆ ಕರೋನಾ ಬರದಂತೆ ತಡೆಯಲು ಸಾಧ್ಯವಿದೆ ಎಂದರು. 

ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್‌.ಎಸ್‌.ಸಿದ್ದನ್ನವರ, ಪಿಎಸ್‌ಐ ವಾಯ್‌.ಎಲ್‌.ಶಿಗಿಹಳ್ಳಿ, ನೋಡಲ್ ಅಧಿಕಾರಿ ಪಾಟೀಲ್, ಗ್ರಾ. ಪಂ ಅಧ್ಯಕ್ಷ ಪ್ರಕಾಶ್ ಬಡವಣ್ಣವರ, ಪಿಡಿಒ ಶಿವಾನಂದ ಕಲ್ಲೂರ್,  ಗ್ರಾ. ಪಂ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. 

ಸುದ್ದಿ ಓದಿ