ದೇವರಲ್ಲಿ ಅನನ್ಯ ಭಕ್ತಿ ಹೊಂದಿದ ಹಾಲುಮತ ಸಮಾಜ: ಭೂಸನೂರ
ಸಿಂದಗಿ 07; ತಮ್ಮ ನಿಷ್ಠಾವಂತ ದುಡಿಮೆಯ ಮೂಲಕ ದೇವರಲ್ಲಿ ಅನನ್ಯ ಭಕ್ತಿ ಹೊಂದಿದ ಸಮಾಜ ಹಾಲುಮತ ಸಮಾಜ. ಈ ಸಮಾಜ ಹಾಲಿನಷ್ಟೇ ಪವಿತ್ರವಾದುದ್ದು ಎಂದು ಶಾಸಕ ರಮೇಶ್ ಭೂಸನೂರ ಹೇಳಿದರು.
ತಾಲೂಕ ಮೋರಟಗಿ ಗ್ರಾಮದ ಆರಾಧ್ಯದೇವ ಕೇರಿಸಿದ್ದೆಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಟ್ಟ ಮಾತಿಗೆ ತಮ್ಮ ಪ್ರಾಣವನ್ನೇ ಕೊಡುವ ಹಾಲುಮತ ಸಮಾಜದ ಭಾಂದವರು, ಕಳೆದ ಉಪಚುನಾವಣೆಯಲ್ಲಿ ನನ್ನ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಮಾಜಕ್ಕೆ ನಾನು ನೀಡಿರುವ ಭರವಸೆಗಳು ಹುಸಿಯಾಗದಂತೆ ಸಮಾಜದ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿ ಬಂದರು ಕೂಡ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮೋರಟಗಿ ಗ್ರಾಮದ ಹಿರಿಯ ಮುಖಂಡ ಮೈಹಿಬೂಬಸಾಬ ಕಣ್ಣಿ ಮಾತನಾಡಿ, ಕಳೆದ ನಲವತ್ತು ವರ್ಷದಿಂದ ಮೋರಟಗಿ ಗ್ರಾಮವು ಸಿಂದಗಿ ತಾಲೂಕಿನಲ್ಲಿ ಇತ್ತು. ಅದೀಗ ನಮ್ಮ ಗ್ರಾಮ ನೂತನ ಆಲಮೇಲ ತಾಲೂಕಿಗೆ ಸೇರೆ್ಡಗೊಂಡಿದೆ. ಮತಕ್ಷೇತ್ರದ ಸಿಂದಗಿ ಇದೆ. ಪದೇ ಪದೇ ಮೋರಟಗಿ ಗ್ರಾಮಸ್ಥರು ಸಂಕಷ್ಟವನ್ನೇ ಎದುರಿಸುವ ಪರಿಸ್ಥಿತಿ ಬರುತ್ತಿವೆ. ಅಲಮೇಲ ತಾಲೂಕಿಗೆ ಸೇರಿರುವ ನಮ್ಮ ಗ್ರಾಮ ಸಿಂದಗಿ ತಾಲೂಕಿನಲ್ಲೇ ಇರುವ ಹಾಗೆ ಮಾಡಿ ಎಂದು ಶಾಸಕ ರಮೇಶ ಭೂಸನೂರ ಅವರಿಗೆ ವೇದಿಕೆ ಮೇಲೆ ಸಮಸ್ತ ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಂಡರು.
ಮನವಿಗೆ ಉತ್ತರಿಸಿದ ಶಾಸಕ ಭೂಸನೂರ ನೂತನ ಅಲಮೇಲ ತಾಲೂಕಿಗೆ ಸೇರಿರುವ ಹಳ್ಳಿಗಳು ಸಿಂದಗಿ ತಾಲೂಕಿನಲ್ಲೇ ಉಳಿದರೆ, ಆಲಮೇಲ ತಾಲೂಕು ಆಗಲು ಸಾಧ್ಯವಿಲ್ಲ. ಕಾರಣ ಮೋರಟಗಿ ಹಾಗೂ ಬಳಗಾನೂರ ಗ್ರಾಮವನ್ನು ಹೋಬಳಿ ಕೇಂದ್ರೀವನ್ನಾಗಿಸುವುದು ನನ್ನ ಜವಾಬ್ದಾರಿ. ಅದನ್ನು ನಾನು ಮಾಡಿಯೇ ತಿರುತ್ತೇನೆ ಎಂದು ಭರವಸೆ ನೀಡಿದರು.
ದಿವ್ಯ ಸಾನಿದ್ಯ ವಹಿಸಿದ ಶ್ರೀಕ್ಷೇತ್ರ ಹುಲಿಜಂತಿ ಪಟ್ಟದ ಪೂಜ್ಯರಾದ ಮಹಾಲಿಂಗರಾಯ ಮಹಾರಾಜರು ಹಾಗೂ ಓಬಿಸಿ ತಾಲೂಕ ಅಧ್ಯಕ್ಷ ರವಿಕಾಂತ ನಾಯ್ಕೊಡಿ ಧರ್ಮಸಭೆ ಉದ್ದೇಶಿಸಿ ಮಾತನಾಡಿದರು.
ಮನರಂಜಿಸಿದ ಡೊಳ್ಳಿನ ಗಾಯನ ಸ್ಪರ್ಧೆ : ಜಾತ್ರಾ ನಿಮಿತ್ಯವಾಗಿ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಇಸ್ಲಾಂ ಧರ್ಮದ ಕಲಾವಿದ ಮೈಬೂಬಸಾಬ ಹಾಗೂ ಕಲಗುರ್ಕಿ ಗ್ರಾಮದ ಲಕ್ಷ್ಮಿ ಪೂಜಾರಿ ನಡುವೆ ಜಿದ್ದಾಜಿದ್ದಿನ ಗಾಯನಗಳು ಜನರ ಮನರಂಜಿಸಿದವು ಬೆಳಿಗ್ಗೆ 11 ಘಂಟೆಗೆ ಪ್ರಾರಂಭವಾದ ಡೊಳ್ಳಿನ ಗಾಯನ ಸ್ಪರ್ಧೆ ಸಾಯಂಕಾಲ 5 ಘಂಟೆಗೆ ಮುಕ್ತಾಯಗೊಂಡವು ಕೊನೆಯಲ್ಲಿ ಎರಡು ತಂಡಗಳು ಸರಿಸಮಾನಾಗಿ ಬಹುಮಾನ ಪಡೆದುಕೊಂಡವು.
ಕಾರ್ಯಕ್ರಮದಲ್ಲಿ ಬಿಳಿಯನಿಸಿದ್ದ ಒಡೆಯರ, ರಾವತ್ರಾಯ ದೇವರು ಸಾನಿಧ್ಯ ವಹಿಸಿದ್ದರು ಗ್ರಾ.ಪಂ. ಅಧ್ಯಕ್ಷ ಬಸಲಿಂಗಪ್ಪಸಾಹು ಬೋನಾಳ, ಮಾಜಿ ಜಿ. ಪಂ. ಸದಸ್ಯ ಎನ್, ಆರ್, ತಿವಾರಿ ನಿಂಗನಗೌಡ ಮೈಬುಬಸಾಬ ಕಣ್ಣಿ, ಕಲ್ಪವೃಕ್ಷ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಮಾಜಿ ತಾ. ಪಂ. ಅಧ್ಯಕ್ಷ ಶಿವರಾಯ ಹಿಪ್ಪರಗಿ, ಮಾಜಿ ತಾ.ಪಂ. ಸದಸ್ಯ ಮಡಿವಾಳಪ್ಪ ಬೋನಾಳ, ರವಿಕಾಂತ ನಾಯ್ಕೋಡಿ, ಜಿ, ಕೆ, ನೆಲ್ಲಗಿ, ನಿಂಗನಗೌಡ ಪಾಟೀಲ, ಅಮ್ಮಣ್ಣ ವಾಲಿಕಾರ, ಇನಾಯತ್ ದೊಡಮನಿ, ಸುಬ್ಬುರಾವ ಗಾಯತ್ರಿ, ಡಾ. ಶ್ರೀಶೈಲ್ ಕೋಣಶಿರಸಗಿ, ಭೂತಾಳಿ ಖಾನಾಪುರ, ಸೇರಿದಂತೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಗ್ರಾಮಸ್ಥರು ಇದ್ದರು.