ನವಲಗುಂದ

ಅಧ್ಯಕ್ಷರಾಗಿ ಹಳ್ಳದ ಉಪಾಧ್ಯಕ್ಷರಾಗಿ ಪೂಜಾರ ಆಯ್ಕೆ

ಅಧ್ಯಕ್ಷರಾಗಿ ಹಳ್ಳದ ಉಪಾಧ್ಯಕ್ಷರಾಗಿ ಪೂಜಾರ ಆಯ್ಕೆ

ನವಲಗುಂದ : ನವಲಗುಂದ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಅಧ್ಯಕ್ಷರಾಗಿ ಅಪ್ಪಣ್ಣ ಹಳ್ಳದ ಉಪಾಧ್ಯಕ್ಷರಾಗಿ ಪದ್ಮಾವತಿ ಪೂಜಾರ ಅವರುಗಳು ಆಯ್ಕೆಯಾಗಿದ್ದಾರೆ, ಆಯ್ಕೆ ಮಾಡಲು ಎಲ್ಲ ಮುಖಂಡರು ಹಾಗೂ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ, ನವಲಗುಂದ ಮಾಜಿ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು. 

ಇಂದು ನವಲಗುಂದ ಪುರಸಭೆಯ ಅಧ್ಯಕ್ಷರಾಗಿ ಅಪ್ಪಣ್ಣಾ ಹಳ್ಳದ ಉಪಾಧ್ಯಕ್ಷರಾಗಿ   ಪದ್ಮಾವತಿ ಪೂಜಾರ ಅವರನ್ನು ಆಯ್ಕೆ ಮಾಡಿದ ನಂತರ ಮಾತನಾಡಿದ ಅವರು ಪುರಸಭೆಯಲ್ಲಿ ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್‌ನ 17 ಸದಸ್ಯರಿದ್ದು ಅದರಲ್ಲಿ 3 ಜನ ಕಾಂಗ್ರೆಸ್ ಸದಸ್ಯರು ಸಮಯಕ್ಕೆ ಸರಿಯಾಗಿ ಆಗಮಿಸದ ಹಾಗೂ ಹನಮಂತ ವಾಲೀಕಾರ ಅವರು ಅನಾರೋಗ್ಯದ ಕಾರಣ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ, ಚುನಾವಣೆ ಪ್ರಕ್ರಿಯೆಯಲ್ಲಿ 13 ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪರವಾಗಿ 13 ಜನ ಕೈ ಎತ್ತುವುದರ ಮೂಲಕ ಆಯ್ಕೆ ಮಾಡಲಾಯಿತು. ಬಿಜೆಪಿ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮಾಂತೇಶ ಕಲಾಲ ಉಪಾಧ್ಯಕ್ಷ ಸ್ಥಾನಕ್ಕೆ   ಜ್ಯೋತಿ ಗೊಲ್ಲರ ಇವರು ನಾಮಪತ್ರ ಸಲ್ಲಿಸಿದ್ದು ಇಬ್ಬರಿಗೂ ಕೇವಲ 6 ಮತಗಳು ಮಾತ್ರ ಲಭಿಸಿದವು. ಕಳೆದ ತಿಂಗಳಲ್ಲಿ ಜರುಗಿದ ಅಣ್ಣಿಗೇರಿ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇಂದಿನ ಚುನಾವಣೆಯಲ್ಲಿ ನವಲಗುಂದ ಪುರಸಭೆ ಕಾಂಗ್ರೆಸ್ ವಶಕ್ಕೆ ಬಂದಿದ್ದರಿಂದ ಸಹಕರಿಸಿದ ಎಲ್ಲ ಸದಸ್ಯರಿಗೆ ಎನ್‌.ಹೆಚ್‌. ಕೋನರಡ್ಡಿ ಕೃತಜ್ಞತೆ ಸಲ್ಲಿಸಿದರು.  

ನವಲಗುಂದ ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಫಲಿತಾಂಶದ ನಂತರ ಕಾಂಗ್ರೇಸ್ ಪಕ್ಷದಿಂದ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ, ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ,  ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ದಮಾನಗೌಡ ಹಿರೇಗೌಡ್ರ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ನವಲಗುಂದ ಪುರಸಭೆ ಸದಸ್ಯರಾದ ಮಂಜುನಾಥ ಜಾಧವ, ಜೀವನ ಪವಾರ, ಶಿವಾನಂದ ತಡಸಿ, ಮೋದಿನಸಾಬ ಶಿರೂರ, ಮಾಂತೇಶ ಭೋವಿ,   ಮುದಕವ್ವ ಬೆಂಡಿಗೇರಿ, ಶ್ರೀಮತಿ ಖೈರುನಬಿ ನಾಶಿಪುಡಿ,   ಫರೀದಾಬೇಗಂ ಬಬರ್ಚಿ,   ಚಂದ್ರಲೇಖಾ ಮಳಗಿ, ಪಕ್ಷದ ಮುಖಂಡರಾದ ಉಸ್ಮಾನ ಬಬರ್ಚಿ, ಸದುಗೌಡ ಪಾಟೀಲ, ಶರಣು ಹಿರೇಮಠ, ಈರಣ್ಣಾ ಶಿಡಗಂಟಿ ಹಾಗೂ ಮುಖಂಡರುಗಳು ಸೇರಿ ಸನ್ಮಾನಿಸಿದರು. 


ಸುದ್ದಿ ಓದಿ