ಹಳೆ ಹೊನ್ನತ್ತಿ : ಗಣೇಶೋತ್ಸವಕ್ಕೆ ರಂಗು ನೀಡಿದ ಸುಗಮ ಸಂಗೀತ
ರಾಣೆಬೆನ್ನೂರು 18: ಹಬ್ಬ-ಹರಿದಿನಗಳು, ಜಾತ್ರೆ-ಉತ್ಸವಗಳು ಗಣೇಶೋತ್ಸವದ ಮೆರವಣಿಗೆಗಳು ಪರಿ ಪೂರ್ಣಗೊಳ್ಳಬೇಕಾದರೆ, ಸುಗಮ ಸಂಗೀತ, ಜನಪದ ಸಂಗೀತ, ಲಾವಣಿ, ಗೀಗೀ ಸಾಂಸ್ಕೃತಿಕ ಕಲೆಗಳು ಬಹುಮುಖ್ಯವಾಗಿವೆ ಎಂದು ಸಮಾಜದ ಮುಖಂಡ ನಾಗಪ್ಪ ಭಜಂತ್ರಿ ಹೇಳಿದರು. ಅವರು ರವಿವಾರ ಮಧ್ಯಾಹ್ನ ತಾಲೂಕಿನ ಹಳೆ ಹೊನ್ನತ್ತಿ ಗ್ರಾಮದ, ಡಾ : ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜಿತ, ಹುಲಗೂರು, ಸಪ್ತಸ್ವರ ಸಂಗೀತ ಗಾಯನ ಸಂಸ್ಥೆ ಆಯೋಜಿಸಿದ್ದ, ಹೂನ್ನಮ್ಮ ದೇವಿ ಕಲಾತಂಡದ ಬಸವರಾಜ ಬಜಂತ್ರಿ ಸಂಗಡಿಗರ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತಿಹಾಸದಲ್ಲಿ ಕಲಾವಿದರು, ಈ ದೇಶಕ್ಕೆ ತಮ್ಮಲ್ಲಿರುವ ಅಪ್ರತಿಮ ಕಲೆಯ ಮೂಲಕ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನೀಡಿದವರಾಗಿದ್ದಾರೆ. ಕಲೆ ಮತ್ತು ಕಲಾವಿದರು ಇಂದು ನೇಪತ್ಯಕ್ಕೆ ಸರಿಯುವ ಸ್ಥಿತಿಗೆ ಬಂದಿದ್ದಾರೆ, ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜೊತೆ ಜೊತೆಗೆ, ಸಂಘ-ಸಂಸ್ಥೆಗಳು, ಮಠ ಪೀಠಗಳು ಧರ್ಮಾಭಿಮಾನಿಗಳು, ಸಾರ್ವಜನಿಕರು ವೇದಿಕೆಯನ್ನು ಒದಗಿಸುವ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು. ಸಮಾಜದ ಇನ್ನೋರ್ವ ಮುಖಂಡ ಚಿತ್ರ ಶೇಖರ ಹುಬ್ಬಳ್ಳಿ ಅವರು ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಗ್ರಾಮದ ಗಣ್ಯರಾದ ಚಂದ್ರ್ಪ ಬೆನಕಜ್ಜಿ, ತಿರಕಪ್ಪ ಮಾಳಗಿ, ಪವಿತ್ರಾ ಭಜಂತ್ರಿ, ಪುಟ್ಟಪ್ಪ ಭಜಂತ್ರಿ, ಲಲಿತಾ ಭಜಂತ್ರಿ, ರೂಪಾ ಭಜಂತ್ರಿ, ನಿರ್ಮಲಾ ಭಜಂತ್ರಿನೀಲವ್ವ ಭಜಂತ್ರಿ, ಸೇರಿದಂತೆ ಮತ್ತಿತರ ಗಣ್ಯರು ಗ್ರಾಮದ ನಾಗರಿಕರು ಮತ್ತು ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಉತ್ಸವದಲ್ಲಿ ನಡೆದ ಖ್ಯಾತ ಕಲಾವಿದ ಬಸವರಾಜ ಭಜಂತ್ರಿ ಸಂಗಡಿಗರ ಸುಗಮ ಸಂಗೀತ ಕಾರ್ಯಕ್ರಮವು, ವಿಶೇಷ ಮೆರಗು ನೀಡಿದ್ದವು.