ಶಿಗ್ಗಾವ್

ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಜು.27 ಕ್ಕೆ. ಸಕಲ ಸಿದ್ದತೆಗೆ ತಹಶೀಲ್ದಾರರ ಸೂಚನೆ

ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಜು.27 ಕ್ಕೆ. ಸಕಲ ಸಿದ್ದತೆಗೆ ತಹಶೀಲ್ದಾರರ ಸೂಚನೆ

ಶಿಗ್ಗಾವಿ 19: ಹಾವೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಜು. 27ರಂದು ಶಿಗ್ಗಾವಿ ಪಟ್ಟಣದಲ್ಲಿ ಆಚರಿಸುವಂತೆ ನಿರ್ಧರಿಸಲಾಗಿದ್ದು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಸಂತೋಷ ಹಿರೇಮಠ ಸೂಚಿಸಿದರು. 

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕಾ ಆಡಳಿತ ಮತ್ತು ಹಡಪದ ಸಮಾಜದ ಸೇರಿದಂತೆ ವಿವಿಧ ಸಮಾಜಗಳ ಮುಖಂಡರ ಸಹಯೋಗದಲ್ಲಿ ನಡೆದ ನಿಜಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಪೂರ್ವಭಾವಿ ಸಭೆ ನೇತೃತ್ವ ವಹಿಸಿ  ಮಾತನಾಡಿದ ಅವರು, ಜು. 21 ರಂದು ಸಾಂಕೇತಿಕವಾಗಿ ಕಚೇರಿಯಲ್ಲಿ ಜಯಂತಿ ಆಚರಣೆ ಮಾಡಲಾಗುವುದು ಜು. 27 ರಂದು ತಾಲೂಕಾ ಹಡಪದ ಅಪ್ಪಣ್ಣನವರ ನಡೆಯುವ ಜಿಲ್ಲಾ ಮಟ್ಟದ ಜಯಂತಿ ಆಚರಣೆಗೆ ಸಂಪೂರ್ಣ ಸಹಕಾರ ನೀಡುವ ಬರವಸೆ ನೀಡಿದರು. 

ತಾಲೂಕಾ ಹಡಪದ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಮಾತನಾಡಿ, ಹಡಪದ ಅಪ್ಪಣ್ಣ ಅವರು ಬಸವಣ್ಣವರ ಸಮಕಾಲಿನವರು. ಹೀಗಾಗಿ ತಮ್ಮ ವಚನಗಳಿಂದ ಉತ್ತಮ  ಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ಅಂತಹ ಮಹಾತ್ಮರ ಜಯಂತ್ಯೋತ್ಸವವನ್ನು ಸರ್ವ ಸಮಾಜದ ಜನರೊಂದಿಗೆ ಒಂದಾಗಿ ಆಚರಿಸಬೇಕು. ಈ ಬಾರಿ ಜಿಲ್ಲಾ ಮಟ್ಟದ ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಆಚರಿಸಲಾಗುತ್ತಿದ್ದು, ಅದಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದರು. 

ಬಿಇಒ ಎಂ.ಬಿ.ಅಂಬಿಗೇರ, ತಾಪಂ ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಪುರಸಭೆ ಮುಖ್ಯಾಧಿಕಾರಿ ಎ.ಶಿವಪ್ಪ, ಮುಖಂಡರಾದ ಬಸವರಾಜ ಹಡಪದ, ಮುತ್ತಣ್ಣ ಕ್ಷೌರದ, ಮಹಾಲಿಂಗಪ್ಪ ಹಡಪದ, ಶಿವರಾಜ ಹಡಪದ, ಜಗದೀಶ ಹಡಪದ, ಕೊಟೆಪ್ಪ ಹಡಪದ, ಗುರುಬಸಪ್ಪ ಹಡಪದ, ಬಸವರಾಜ ನೀರಲಗಿ, ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಕಾಳಪ್ಪ ಬಡಿಗೇರ, ಕುರುಬರ ಸಮಾಜದ ತಾಲ್ಲೂಕು ಅಧ್ಯಕ್ಷ ಫಕ್ಕೀರ​‍್ಪ ಕುಂದೂರ, ದಲಿತ ಸಮಾಜದ ಮುಖಂಡ ಕರೆಪ್ಪ ಕಟ್ಟಿಮನಿ, ರೈತ ಸಂಘಟಕದ ತಾಲ್ಲೂಕು ಅಧ್ಯಕ್ಷ ಆನಂದ ಕೆಳಗಿಮನಿ, ಉಪಾಧ್ಯಕ್ಷ ಶಂಕರಗೌಡ ಪಾಟೀಲ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಹಡಪದ ಅಪ್ಪಣ್ಣ ಸಮಾಜದ ಮುಖಂಡರು ಇದ್ದರು. 


ಸುದ್ದಿ ಓದಿ