ಹೂವಿನ ಹಡಗಲಿ

ಹಡಗಲಿಯ ಪ್ರೌಢಶಾಲಾ ಪ್ರತಿಭಾ ಕಾರಂಜಿ

ಹಡಗಲಿಯ ಪ್ರೌಢಶಾಲಾ ಪ್ರತಿಭಾ ಕಾರಂಜಿ

ಹೂವಿನ ಹಡಗಲಿ 15: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅರಳಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯಂತ ಉಪಯುಕ್ತ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯು ಹಿರಿಯ ಅಧಿಕಾರಿಗಳಾದ ಹರೀಶ್ ಹೇಳಿದರು. 

ಪಟ್ಟಣದ ಜಿ ಪಿ ಜಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆವತಿಯಿಂದ ಆಯೋಜಿಸಿದ್ದ ಪಟ್ಟಣ ವ್ಯಾಪ್ತಿಯ ಪ್ರೌಢಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಭಾಷಣ, ಗಾಯನ, ಚರ್ಚೆ,ಕವಿತೆ ವಾಚನ ರಸಪ್ರಶ್ನೆಭರತನಾಟ್ಯ ಜಾನಪದ ನೃತ್ಯಮೊದಲಾದ ಸ್ಪರ್ಧೆಗಳು ಮಕ್ಕಳಜ್ಞಾನ ವಿಕಾಸಕ್ಕೆ ಸಹಕಾರಿ ಎಂದು ಅಭಿಪ್ರಾಯಪಟ್ಟರು. 

ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲ ಪಿ ಪ್ರಕಾಶ್ ಅತ್ಯಂತ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ತೀಪುಗಾರ ಶಿಕ್ಷಕರು ನ್ಯಾಯಸಮ್ಮತ ನಿರ್ಣಯ ನೀಡಿರಿ ಎಂದು ಹೇಳಿದರು. 

ಶಿಕ್ಷಣ ಸಂಯೋಜಕ ಮಿಟ್ಯಾನಾಯ್ಕ, ಹಾಲೇಶ್ವರಿರೇಣುಕಾ ಸರಾಫ್, ಸುರೇಶ ಅಂಗಡಿ ಉಪಸ್ಥಿತರಿದ್ದರು.ಸಂಗೀತ ಶಿಕ್ಷಕಿ ಅರ್ಚನಾ ಜೋಷಿ ಹಾಗೂ ವಿದ್ಯಾರ್ಥಿಗಳುಪ್ರಾರ್ಥಿಸಿದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕ ಕಾಂತೇಶ್ ಹೆಚ್, ಎಲ್ ಖಾದರ್ ಬಾಷಾ, ಕೋಟೆಪ್ಪ ನಿರ್ವಹಿಸಿದರು. ಪಟ್ಟಣದ ಸರ್ಕಾರಿ ಅನುದಾನಿತ ಅನುದಾನರಹಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 


ಸುದ್ದಿ ಓದಿ