ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಜ್ಞಾನೇಶ ಆಯ್ಕೆ
ಲೋಕದರ್ಶನ ವರದಿ
ಯರಗಟ್ಟಿ 31: ಸಮೀಪದ ಯರಗಣವಿ ಗ್ರಾಮದ ವಿದ್ಯಾರ್ಥಿ ಜ್ಞಾನೇಶ ನಾಯ್ಕಪ್ಪಗೋಳ ಇತನು ಜಿಲ್ಲಾ ಮಟ್ಟದ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ವಿದ್ಯಾರ್ಥಿಯ ಸಾಧನೆಗೆ ಮುರಾರ್ಜಿ ವಸತಿ ಶಾಲೆಯಸಿಬ್ಬಂದಿ ಹಾಗೂ ತರಬೇತಿದಾರರಾದ ಸುನಕುಂಪಿ ಶಿಕ್ಷಕರು ಹಾಗೂ ಪ್ರಾಚಾರ್ಯರಾದ ಪೂಜೇರ ಶಿಕ್ಷಕರು ಮತ್ತು ಯರಗನವಿ ಗ್ರಾಮ ಗುರು-ಹಿರಿಯರು ಮತ್ತು ಪಾಲಕರು ಈ ವಿದ್ಯಾರ್ಥಿ ಸಾಧನೆಗೆ ಹರ್ಷವ್ಯಕ್ತಪಡಿಸಿದ್ದಾರೆ.