ಧಾರವಾಡ - ಹುಬ್ಬಳ್ಳಿ

ಗುರುಪುರ್ಣಿಮೆಯ ಗುರುವಂದನಾ ಕಾರ್ಯಕ್ರಮ

ಗುರುಪುರ್ಣಿಮೆಯ ಗುರುವಂದನಾ ಕಾರ್ಯಕ್ರಮ

ಧಾರವಾಡ 22 : ಗುರು ಒಬ್ಬ ವ್ಯಕ್ತಿ ಅಲ್ಲ ಶಕ್ತಿ. ಗುರು ತಾನಾಗಿಯೇ ಹುಟ್ಟಿ ಬರಬೇಕು ಅವನು ಯಾರ ಸೃಷ್ಠಿಯೂ ಅಲ್ಲ ಎಂದು ಧಾರವಾಡದ ಜೆ.ಎಸ್‌.ಎಸ್ ಕನ್ನಡ ಮಾಧ್ಯಮ ಪೌಢಶಾಲೆಯಲ್ಲಿ ಗುರುಪುರ್ಣಿಮಾ ನಿಮಿತ್ತ ಗುರುವಂದನಾ ಕಾರ್ಯಕ್ರಮಕ್ಕೆ ಸನ್ಮಾನಿತರಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕರಾದ ಶ್ರೀಯುತ ತವನಪ್ಪ ಉಪಾಧ್ಯೆಯವರು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಎಲ್ಲ ವಿದ್ಯೆಗಳಲ್ಲಿ ಅಕ್ಷರವಿದ್ಯೆಯು ಪರಮಶ್ರೇಷ್ಠವಾದ ವಿದ್ಯೆ ಅದನ್ನು ಧಾರೆ ಎರೆಯುವ ನಾವೆಲ್ಲರೂ ಸಂತೃಪ್ತರು, ಶ್ರೀಮಂತರು.  

ಯಾರು ಕದಿಯದ, ಕಸಿಯದ, ಮಾಸಿ ಹೋಗದ ಆಸ್ತಿ ನಾವು ನೀಡುವ ವಿದ್ಯೆಯಾಗಿದೆ ಎಂದರು. ಆದ್ದರಿಂದ ಪಾಲಕರು ಬೇರೆ ಏನನ್ನು ಆಸ್ತಿಯನ್ನಾಗಿ ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕೆಂದು ತಿಳಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಮೈನಾವತಿ ದಿವಟೆ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಶ್ರೀಮತಿ. ಕವಿತಾ ಪಕ್ಕಳ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಶ್ರೀಮತಿ ಶ್ಯಾಮಲಾ ಹೆಗಡೆ ವಂದಿಸಿದರು. ಶ್ರೀಮತಿ ವಿಜಯಲಕ್ಷ್ಮಿ ನೂಲ್ವಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಎಲ್ಲ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ