ಹೂವಿನ ಹಡಗಲಿ

ಹಡಗಲಿಯಲ್ಲಿ ಗುರು ವಂದನಾ ಕಾರ್ಯಕ್ರಮ

ಹಡಗಲಿಯಲ್ಲಿ ಗುರು ವಂದನಾ ಕಾರ್ಯಕ್ರಮ

ಲೋಕದರ್ಶನ ವರದಿ

ಹಡಗಲಿ: 1967 68 ನೇ ಸಾಲಿನ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳು ಸ್ನೇಹಕೂಟ ಮತ್ತು ಗುರು ವಂದನಾ ಕಾರ್ಯಕ್ರಮವನ್ನು ಹಡಗಲಿ ಪಟ್ಟಣದ ಹಿರಿ ಶಾಂತವೀರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮದ ಪ್ರಸ್ತಾವಿಕತೆಯಲ್ಲಿ ಮಾತನಾಡಿದ ಡಾಕ್ಟರ್ ಬಿ ಟಿ ಪಣಿರಾಜ್ ಈ ಸಮಾರಂಭ ಹೇಗೆ ಪ್ರಾರಂಭವಾಯಿತು ಎಂದರೆ ಸ್ನೇಹಿತರದ ಶ್ರೀ ಎಚ್ ಪಾಶ್ರ್ವನಾಥ್  ಹಾಗೂ ಎ ನಾಗೇಶ್ ಇವರು ನಾನು ಪ್ರಸ್ತುತ ಹೂವಿನಹಡಗಲಿಯಲ್ಲಿ  ಇರುವವರು ನಾವು.ನಮಗೆ ಕಲಿಸಿದ ಶಿಕ್ಷಕರ ಮನೆ ಮನೆಗೆ ತೆರಳಿ ಶಾಲು ಹಾಕಿ ಸನ್ಮಾನಿಸಬೇಕು ಎಂದು ಅಂದುಕೊಂಡಿದ್ದೆವು,ಹಾಗೆ ಒಂದು ದಿನ ಮೂರು ಜನ ಸೇರಿ  ಅವರ ನನ್ನ ಮನೆಗೆ ಬಂದು ಸನ್ಮಾನದ ಬಗ್ಗೆ ಚರ್ಚಿಸಿದಾಗ 67-68 ನೇ ಸಾಲಿನ ಎಲ್ಲಾ ವಿದ್ಯಾರ್ಥಿ ಮಿತ್ರರನ್ನು ಒಂದೆಡೆ ಸೇರಿಸಿ ಏಕೆ ಗುರುವಂದನಾ ಸಮಾರಂಭ ಮಾಡಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಹಡಗಲಿಯಲ್ಲಿ ಇರುವ ಮಿತ್ರರಾದ ವಿಜಯಕುಮಾರ್ ಪಾಟೀಲ್ ಟಿ ದೇವಪುತ್ರಪ್ಪ ವಸ್ತು ಪಾಲ್ ಜೈನ್ ಪತ್ರಪ್ಪ ಇನ್ನೂ ಹಲವಾರು ಜನ ಸ್ನೇಹಿತರು ಫೋನ್ ನಂಬರ್ ಸಂಗ್ರಹಿಸಿ ದೊರೆತ ಎಲ್ಲಾ ಸ್ನೇಹಿತರಿಗೆ ಫೋನ್ ಮಾಡಿ ವಿಷಯ ಪ್ರಸ್ತಾಪಿಸಿದೆವು. ಆಗ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ ಇದು ಒಳ್ಳೆಯ ಆಲೋಚನೆ 55 ವರ್ಷಗಳ ನಂತರ ನಾವೆಲ್ಲರೂ ಒಟ್ಟಿಗೆ ಸೇರುವ ಒಂದು ಅವಕಾಶ ದೊರೆತಂತಾಗುತ್ತದೆ ಹಾಗೂ ನಮಗೆ ವಿದ್ಯಾ ದಾನ ಮಾಡಿದ ಗುರುಗಳನ್ನು ಗೌರವಿಸಿದಂತೆ ಆಗುತ್ತದೆ ಎಂದು ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ವೇದಿಕೆ ಮೇಲಿರುವ ಈ ಗುರುಗಳು ನಮಗೆ ಉತ್ತಮ ಬೋಧನೆ ಮಾಡಿದ್ದಕ್ಕಾಗಿ ಇಂದು ನಾವು ಡಾಕ್ಟರ್ ಆಗಿದ್ದೇವೆ ಇಂಜಿನಿಯರ್ ಆಗಿದ್ದೇವೆ ಶಿಕ್ಷಕರಾಗಿದ್ದಾರೆ ಪೊಲೀಸ್ ಅಧಿಕಾರಿಗಳಾಗಿದ್ದೇವೆ ವರ್ತಕರಾಗಿದ್ದವೇ ಇದರ ಜೊತೆಗೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುತ್ತಿದ್ದೇವೆ ಎಂದು ಬಿಟಿ ಪಣಿರಾಜ್ ತಮ್ಮ ಪ್ರಾಸ್ತಾವಿಕತೆ ಯಲ್ಲಿ ಮಾತನಾಡಿದರು.  ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಪ್ರೀತಿಗೆ  ಭಾಜನಾ ಶಿಕ್ಷಕರುಗಳಾದ ಕೆ ವಿರುಪಾಕ್ಷಗೌಡರು ನಿವೃತ್ತ ಪ್ರಾಂಶುಪಾಲರು, ಎನ್ ಮೋಯಿದ್ದೀನ್ ಸಾಹೇಬ್ ನಿವೃತ್ತ ಸಾಯಕ ಕೃಷಿ ನಿರ್ದೇಶಕರು, ಎಚ್ ಎಂ ಬೆಟ್ಟಯ್ಯ, ಇದ್ದರು.

ಸುದ್ದಿ ಓದಿ