ಧಾರವಾಡ - ಹುಬ್ಬಳ್ಳಿ

ಗುರುವಂದನಾ ಸಂಗೀತೋತ್ಸವ ಕಾರ್ಯಕ್ರಮ

ಗುರುವಂದನಾ ಸಂಗೀತೋತ್ಸವ ಕಾರ್ಯಕ್ರಮ

ಧಾರವಾಢ 28 : ಆಶಾಡದ ಹುಣ್ಣಿಮೆ ಗುರುಪೂರ್ಣಿಮೆ ಅಂಗವಾಗಿ ಶಿಷ್ಯರು ಗುರುಗಳ ಆಶೀರ್ವಾದ ಪಡೆಯುವ ಮೂಲಕ ಗುರುಸ್ಮರಣೆಯಲ್ಲಿ ತೊಡಗಿಕೊಳ್ಳುವುದೇ ನಿಜವಾದ ಗುರುವಂದನೆಯಾಗಿದೆ.  ಇದನ್ನು ವ್ಯಾಸ ಪೂರ್ಣಿಮೆಯೆಂದು ಕರೆಯುತ್ತೇವೆ ಎಂದು ಸಾಹಿತಿ ಡಾ.ಹ.ವೆಂ.ಕಾಖಂಡಕಿ ಅಭಿಪ್ರಾಯ ಪಟ್ಟರು.   

ದಿ: ಜುಲೈ 28ರಂದು ನಗರದ ಬೇಂದ್ರೆ ಭವನದಲ್ಲಿ ಶ್ರೀಗುರು ಹಿಂದುಸ್ತಾನಿ ಸಂಗೀತ ವಿದ್ಯಾಲಯವು ಏರಿ​‍್ಡಸಿದ್ದ ಗುರುವಂದನಾ ಹಾಗೂ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಹ.ವೆಂ.ಕಾಖಂಡಿಕಿ ಮಾತನಾಡುತ್ತ ವಾಮನ ಬೇಂದ್ರೆಯವರ ಜನ್ಮದಿನದಂದು ಬೇಂದ್ರೆ ಭವನದಲ್ಲಿ ಗುರುವಂದನಾ ಕಾರ್ಯಕ್ರಮ ಏರಿ​‍್ಡಸಿರುವುದು ಓಚಿತ್ಯಪೂರ್ಣವಾದುದು ಎಂದರು.  

ಹಿಂದೂಸ್ತಾನಿ ಶಾಸ್ತ್ರೀಯ ಮತ್ತು  ಉಪ ಶಾಸ್ತ್ರೀಯ ಸಂಗೀತವನ್ನು ಗುರುಮುಖೇನ ಕಲಿತಾಗ ಮಾತ್ರ ಸ್ವರಬದ್ಧವಾಗಿ ಶಾಸ್ತ್ರಬದ್ಧವಾಗಿ ತಾಳಬದ್ಧವಾಗಿ ಹಾಡಲು ಸಾಧ್ಯವಾಗುತ್ತದೆ ಎಂದರು.  ರಶ್ಮಿ ಕಾಖಂಡಿಕಿ ಮಾರ್ಗದರ್ಶನದಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಹೊರಹೊಮ್ಮಲಿ ಎಂದು ಆಶಿಸಿದರು.   

ನಂತರದಲ್ಲಿ ನಡೆದ ಸಂಗೀತೋತ್ಸವದಲ್ಲಿ ರಶ್ಮಿ ಕಾಖಂಡಕಿಯವರು ಹಿಂದೂಸ್ತಾನಿ ಗಾಯನದಲ್ಲಿ ರಾಗ ಕೇದಾರ ಹಾಗೂ ದಾಸವಾಣಿ ಪ್ರಸ್ತುತ ಪಡಿಸಿದರು. ಗಾಯಕ ಬಸವರಾಜ ವಂದಲಿಯವರು ಹಿಂದೂಸ್ಥಾನಿ ಗಾಯನದಲ್ಲಿ ರಾಗ ಪೂರಿಯಾ ಕಲ್ಯಾಣ ಮತ್ತು ಮಹಿಪತಿದಾಸರ ಕೀರ್ತನೆಯನ್ನು ಪ್ರಸ್ತುತ ಪಡಿಸಿದರು.  ತಬಲಾದಲ್ಲಿ ಜಯತೀರ್ಥ ಪಂಚಮುಖಿ, ಅಕ್ಷಯ ಜೋಶಿ ಹಾಗೂ ಹಾರ್ಮೊನಿಯಂದಲ್ಲಿ ವಿನೋದ ಪಾಟೀಲ ಸಾಥ್ ಸಂಗತ ನೀಡಿದರು.  ಶ್ರೀಗುರು ಹಿಂದೂಸ್ತಾನಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ರಾಗಗಳನ್ನು ಪ್ರಸ್ತುತ ಪಡಿಸಿದರು.   

ಕಾವ್ಯಾ ಕುರ್ತಕೋಟಿ ಕಾರ್ಯಕ್ರಮ ನಿರೂಪಿಸಿದರು.  ರಮೇಶ ಕಾಖಂಡಕಿ ಸ್ವಾಗತಿಸಿದರು.  ತಾರಾ ಶೆಟ್ಟಿಯವರು ವಂದಿಸಿದರು.  ವೇದಿಕೆಯಲ್ಲಿ ಸಮೀರ ಜೋಶಿ, ಪ್ರಕಾಶ ಬಾಳಿಕಾಯಿ, ಪುನರ್ವಸು ಬೇಂದ್ರೆ, ವಿಜಯಲಕ್ಷ್ಮೀ, ರಶ್ಮಿ ರಮೇಶ ಕಾಖಂಡಕಿ, ವೆಂಕಟೇಶ ಕಾಖಂಡಕಿ ಉಪಸ್ಥಿತರಿದ್ದರು. 


ಸುದ್ದಿ ಓದಿ