ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ : ಗುರುಪೂರ್ಣಿಮೆ, ಹೋಮ ಹವನ
ರಾಣೇಬೆನ್ನೂರು : ಜು 21- ಮಹಿಳಾ ಶಕ್ತಿ ಸಮಗ್ರ ಕುಟುಂಬದ ಮಾತೃ ಶಕ್ತಿ, ಶಕ್ತಿಯ ಪ್ರತೀಕವೇ ಹೆಣ್ಣು. ಗೌರವ ಸ್ಥಾನಮಾನಗಳು ಅವಳ ಸ್ವತ್ತು ಅಷ್ಟೇ ಅಲ್ಲ ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸಾಧನೆ ಸಮಾನತೆಯ ಸಂಕೇತವಾಗಿದೆ ಎಂದು ಹಾವೇರಿ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿಯ, ಜಿಲ್ಲಾ ಪ್ರಭಾರಿ, ಹಾಗೂ ರಾಜ್ಯ ಸಮಿತಿ ಸದಸ್ಯ ಶ್ರೀಮತಿ ಜ್ಯೋತಿ ಜಂಬಿಗಿ ಹೇಳಿದರು.
ಅವರು, ಇಲ್ಲಿನ ಗೌರಿಶಂಕರ್ ನಗರದ ನಿರಂತರ ಯೋಗ ಕೇಂದ್ರದಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ ಗುರುಪೂರ್ಣಿಮೆ ನಿಮಿತ್ತ ಆಯೋಜಿಸಿದ್ದ, "" ಗುರು ವಂದನ"’ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ತ್ರೀ -ಪುರುಷ ಯಾರೇ ಇರಲಿ, ಮನುಷ್ಯನ ದೀರ್ಘಾಯುಷ್ಯ ಬದುಕಿಗೆ, ನಿತ್ಯವೊ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಯೋಗ ಗುರು, ಯೋಗಾಚಾರ್ಯ ಬಾಬಾ ರಾಮದೇವ್ ಜಿ ಅವರು, ನೀಡಿದೆ ಈ ಯೋಗ ಧ್ಯಾನದ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ.
ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತೀಯರ ಯೋಗ ಧ್ಯಾನ ಮತ್ತು ಸಂಸ್ಕಾರ ಪರಂಪರೆ ಕಡೆಗೆ, ಮುಖ ಮಾಡುವಂತಾಗಿದೆ. ಆದರೆ ನಮ್ಮ ಸಂಸ್ಕೃತಿ ಪರಂಪರೆಯ, ಋಷಿ ಮುನಿಗಳ ಪುರಾತನ ಸಂಸ್ಕೃತಿಯ ಯೋಗ ಪರಂಪರೆಯನ್ನು ನಾವುಗಳು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾದ ಇಂದಿನ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮುಂಜಾನೆ ಗುರುಪೂರ್ಣಿಮೆ ನಿಮಿತ್ತವಾಗಿ ಹೋಮ ಹವನ, ಪೂಜೆ ಪುನಸ್ಕಾರಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಲಲಿತಾ ಮೇಲಗಿರಿ, ಕವಿತಾ ಕುಬಸದ್ ಮಹೇಶ್ವರಿ ಕುಬಸದ, ಲತಾ ಮಾಕನೂರ್, ನಾಗರತ್ನ, ಮಂಜುಳಾ, ಕವಿತಾ ಚಿನ್ನಿಕಟ್ಟೆ, ಸುಜಾತಾ, ರೇಖಾ ವರಮೂರ್ತಿ ಸೇರಿದಂತೆ, ಸಮಿತಿಯ ನೂರಾರು ಯೋಗ ಸಾಧಕರು, ಯೋಗ ಗುರು ಮಾತೆಯರು ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು