ವಿಶ್ವ ವಿಭು ರೇಕಿ ದ್ಯಾನಪೀಠದಲ್ಲಿ ಗುರುಪೂರ್ಣಿಮೆ
ರಾಣೇಬೆನ್ನೂರ :ಜು 22ಇಲ್ಲಿನ ಉಮಾಶಂಕರ ನಗರದಲ್ಲಿರುವ ಶ್ರೀ ವಿಶ್ವವಿಭು ರೇಕಿ ಧ್ಯಾನಪೀಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಹೋಮ ಹವನ, ಪೂಜಾ ವಿಧಿ ವಿಧಾನಗಳು ಜರುಗಿದವು. ನಂತರ ಸಮಸ್ತ ಆದ್ಯಾತ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ಇದೇ ಸಂಧರ್ಭದಲ್ಲಿ ವಿಶ್ವವಿಭು ರೇಕಿ ಧ್ಯಾನ ಪೀಠದ ಆಚಾರ್ಯ ಶ್ರೀ ಮೌನೇಶ್ವರ ಗುರೂಜಿ ಹಾಗೂ ಲಕ್ಷ್ಮೀದೇವಿ ಅಮ್ಮನವರನ್ನು ಅವರ ಶಿಷ್ಯವೃಂಧವು ಗುರುವಂಧನೆ ಸಲ್ಲಿಸಿ, ಗೌರವಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ವಿಶ್ವನಾಥ್ ಕುಂಬಳೂರು ಧ್ಯಾನನಪೀಠದ ಶಿಷ್ಯ ಸಮೂಹವು ಸೇರಿದಂತೆ ಮತ್ತಿತರರು ಇದ್ದರು