ಕಾಗವಾಡ

ಶಿಕ್ಷಕಿ ಎಸ್‌.ಆರ್‌. ಪೂಜಾರಗೆ ಗುರುಕುಲ ತಿಲಕ ಪ್ರಶಸ್ತಿ ಪ್ರದಾನ

ಶಿಕ್ಷಕಿ ಎಸ್‌.ಆರ್‌. ಪೂಜಾರಗೆ ಗುರುಕುಲ ತಿಲಕ ಪ್ರಶಸ್ತಿ ಪ್ರದಾನ

ಶೇಡಬಾಳ 20: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸನ್ಮತಿ ವಿದ್ಯಾಲಯದ ಸಹ ಶಿಕ್ಷಕಿ ಎಸ್‌.ಆರ್‌. ಪೂಜಾರ ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ, ಗುರುಕುಲ ತಿಲಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಇವರ ವತಿಯಿಂದ ಇತ್ತಿಚಿಗೆ ಆಯೋಜಿಸಲಾಗಿದ್ದ ವಿಶ್ವ ಶಿಕ್ಷಕ ದಿನಾಚರಣೆ ಹಾಗೂ ಗುರುಕುಲ ತಿಲಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಟ್ಟಣದ ಸನ್ಮತಿ ವಿದ್ಯಾಲಯದ ಸಹ ಶಿಕ್ಷಕಿ ಎಸ್‌.ಆರ್‌. ಪೂಜಾರ ಅವರಿಗೆ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಪ್ರೊ. ಎಲ್‌.ಎಚ್‌. ಪೆಂಡಾರಿಯವರು ಪ್ರಶಸ್ತಿ ಪ್ರದಾನ ಮಾಡಿದರು. 

ಕಸ್ತೂರಿ ಕನ್ನಡ ವೇದಿಕೆಯ ಗೌರವ ಮಾರ್ಗದರ್ಶಕ ಹಿರಿಯ ಸಾಹಿತಿ ಡಾ. ರಾಧಾ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಸಿ.ಎಂ. ಬಂಡಗರ ಅಧ್ಯಕ್ಷತೆ ವಹಿಸಿದ್ದರು. ಡಾ. ಪದ್ಮಶ್ರೀ ಚೌಗಲೆ ಕಾರ್ಯಕ್ರಮ ನಿರೂಪಿಸಿದರು. ದಾವಲ್‌ಮಲ್ಲಿಕ್ ಇಂಗಳಗಿ ಸ್ವಾಗತ ಭಾಷಣ ಮಾಡಿದರು. ಎಸ್‌.ಆರ್‌. ಪೂಜಾರ ಅವರಿಗೆ ಗುರುಕುಲ ತಿಲಕ ಪ್ರಶಸ್ತಿ ಪಡೆದು ಕೊಂಡಿರುವುದರಿಂದ ಗ್ರಾಮಸ್ಥರು, ಸಹ ಶಿಕ್ಷಕರು ಅವರನ್ನು ಅಭಿನಂದಿಸಿದ್ದಾರೆ. 


ಸುದ್ದಿ ಓದಿ