ದೇಶದ ಐಕ್ಯತೆ ಸಾರುವ ಗುರುಕೃಪಾ ಶಿಕ್ಷಣ ಸಂಸ್ಥೆಯ ಚಿಣ್ಣರ ವೇಷ-ಭೂಷಣ
ಸಿಂದಗಿ14: ಇಡೀ ಜಗತ್ತಿನಲ್ಲಿಯೇ ಇಂದು ಸುಂದರ ಮಹೋತ್ಸವಗಳ ದಿನವಾಗಿದೆ, ಇಂದು ಒಂದು ಅದ್ಭುತ ದೃಶ್ಯಗಳೆಂದರೂ ಕೂಡಾ ತಪ್ಪಿಲ್ಲ. ಸುಂದರ ಪುಷ್ಪಗಳಿಂದ ದೇವರು ಕಂಗೊಳಿಸುವಂತೆ ದೀಪದಿಂದ ಬೆಳಗಿನ ಬೆಳಕು ಉಜ್ವಲವಾದಂತೆ ಮನಸ್ಸು ಭಾಸವಾಗುತ್ತಿದೆ. ಒಂದು ರೀತಿಯಲ್ಲಿ ಇನ್ನೊಂದು ದೀಪಗಳಿಂದ ಬೆಳಗುವ ದೀಪಾವಳಿಯಂತೆ ಮನಸ್ಸಿನಲ್ಲಿಯೇ ಅದ್ಭುತ ಕಲ್ಪನೆಯೊಂದು ಮೂಡುತ್ತದೆ. ಒಂದು ಮನ ಹಾಗೂ ಮನಸ್ಸಿನಲ್ಲಿಯೆ ನನ್ನದು ಹಾಗೂ ನಮ್ಮವರು ಎಂಬ ಭಾವನೆ ಸೃಷ್ಠಿಯಾಗುತ್ತದೆ. ಅದೇ ನಮ್ಮ ದೇಶದಲ್ಲಿನ ಪ್ರತಿ ಮನೆ ಮತ್ತು ಮನಸ್ಸುಗಳ ಏಕತೆ ಅದೇ ತರಹ ನಮ್ಮ ದೇಶದ ಜಾತಿ-ಧರ್ಮ, ನಾಡ-ನುಡಿ, ಸಂಸ್ಕೃತಿಯನ್ನು ಎತ್ತಿಹಿಡಿದ ದೇಶವೆಂದರೂ ತಪ್ಪೇನಿಲ್ಲ.
ಯಾವುದೇ ಪದಗಳಿಂದ ಒಂದು ಶಿಲ್ಪದ ಸೌಂದರ್ಯವನ್ನು ವಣರ್ಿಸಲು ಸಾಧ್ಯವಿಲ್ಲವೋ ಅದೇ ತರಹ ನಮ್ಮ ದೇಶಕ್ಕಾಗಿ ಹೋರಾಡಿದ ಮಹಾನ್ ಪುರುಷರ ತ್ಯಾಗ ಬಲಿದಾನಗಳ ಸಾಕ್ಷಿಯಾಗಿದೆ ಈ ನಮ್ಮ ಭಾರತ. ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಜೀವ ಪಣಕ್ಕಿಟ್ಟು ಹೋರಾಡಿದ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಮಾಣಿಕ್ಯದಂತೆ ಕಂಗೊಳಿಸುತ್ತಿದ್ದಾರೆ.
ಐಕ್ಯತೆ ಎಂದರೆ ಒಂದು ಧರ್ಮ ಹಾಗೂ ಜಾತಿಯಲ್ಲಿನ ವಹಿವಾಟು ಆಚಾರ-ವಿಚಾರ, ನೀತಿ-ನಿಯಮ ನಮ್ಮನ್ನು ಇನ್ನೊಂದು ಪ್ರಪಂಚಕ್ಕೆ ಕೊಂಡೊಯ್ದಿದೆ ಎಂದೇ ಹೇಳಬಹುದು. ಭಾವನೆಗಳನ್ನು ಅರಿತು ಕಲ್ಪನೆಗೂ ಮೀರಿದ ಒಂದು ಅದ್ಭುತ ದೃಶ್ಯ ಎಂದರೆ ಅದೇ ನಮ್ಮ ಉಡುಗೆ-ತೊಡುಗೆ, ಹಾವ-ಭಾವ ಸಹಜತೆ ಒಂದು ಕಡೆ ನಮ್ಮನ್ನು ಐಕ್ಯತೆಯತ್ತ ವಾಲುವಂತೆ ಮಾಡಿದೆ. ಒಂದು ಕ್ಷಣ ದಿಗ್ಭ್ರಮೆಯಿಂದ ಕೂಡುವಂತೆ ಮಾಡಿದ ಚಿಣ್ಣರ ಲೋಕದ ಒಬ್ಬೊಬ್ಬ ಪುಟಾಣಿ ಮಕ್ಕಳು ಉಡುಗೆ-ತೊಡುಗೆ, ಹಾವ-ಭಾವಗಳಿಂದ ಇವತ್ತಿನ ಕಾರ್ಯಕ್ರಮದ ಸೊಬಗನ್ನು ಕಲ್ಪನೆಗೂ ಮೀರಿದ ಊಹೆಯನ್ನು ಸೃಷ್ಟಿಸಿದ ಚಿಣ್ಣರು.
ಸಿಂದಗಿ ತಾಲೂಕಿನ ಸೊಮಪೂರ ರಸ್ತೆಯ ಗುರುಕೃಪಾ ಶಿಕ್ಷಣ ಸಂಸ್ಥೆಯ ಚಿಣ್ಣರು ಹಾಕಿದ ಉಡುಗೆ-ತೊಡುಗೆ, ವೇಷ-ಭೂಷಣ, ಬಣ್ಣ-ಬಣ್ಣಗಳಿಂದ ಕೂಡಿದ ಚಿಣ್ಣರ ಪಾತ್ರ ದೇಶದ ಐಕ್ಯತೆಯನ್ನು ಸಾರುವ ಸಂಸ್ಕೃತಿಯ ಕಲೆಯನ್ನು ಬಿಂಬಿಸುವ ಮಹಾನ್ ಕಾರ್ಯ ಇದಾಗಿದೆ.
ಬಣ್ಣಗಳೇ ಆಗಲಿ, ಜಾತಿ-ಧರ್ಮಗಳೇ ಆಗಲಿ ಒಂದೇ ಎಂದು ತೋರಿಸಿದ ಅದ್ಬುತ ದಿನಕ್ಕೆ ಪಾತ್ರವಾದ ಗುರುಕೃಪಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಹಣಮಂತರಾವ ಪೋದ್ದಾರ ಅವರು ಈ ಚಿಣ್ಣರ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಪ್ರೋತ್ಸಾಹಿಸಿದರು. ಈ ಸಂಸ್ಥೆಯ ಗುರುಮಾತೆಯಾದ ಹೇಮಾ ಪೋದ್ದಾರ ಕಾರ್ಯಕ್ರಮಕ್ಕೆ ಚಿಣ್ಣರನ್ನು ಹುಮ್ಮನ್ನಿಸ್ಸಿನಿಂದ ಕಂಗೊಳಿಸುವಂತೆ ಮಾಡಿ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು. ಶಿಕ್ಷಕ ಸಿಬ್ಬಂದಿಯೂ ಕೂಡಾ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದರು