ರಾಣೆಬೆನ್ನೂರ

ಗುರು ಪೂರ್ಣಿಮೆ: ಸತ್ಯ ನಾರಾಯಣ ಪೂಜೆ

ಗುರು ಪೂರ್ಣಿಮೆ: ಸತ್ಯ ನಾರಾಯಣ ಪೂಜೆ

ರಾಣೇಬೆನ್ನೂರು 06:  ಪದ್ಮಶಾಲಿ ಸಮಾಜದ ವತಿಯಿಂದ ಶ್ರೀ ಸಿದ್ದೇಶ್ವರ ನಗರದಲ್ಲಿರುವ ಶ್ರೀಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಸರ್ವಧರ್ಮ ಸಾಮೂಹಿಕ ಸತ್ಯ ನಾರಾಯಣ ಪೂಜೆ ನೇರವೆರಿಸಿದರು. ಸೋಮುವಾರ ಮುಂಜಾನೆ ಹುಣ್ಣಿಮೆಯ ಪ್ರಯುಕ್ತ ಕ್ಷೇತ್ರದ ಶ್ರೀಮಾರ್ಕಂಡೇಶ್ವರ ದೇವರಿಗೆ ಅಭಿಷೆಕ ಬಿಲ್ವಾಚರಣೆ, ಹನುಮಂತ ದೇವರಿಗೆ ಅಭಿಷೆಕ ಪೂಜೆ, ನವಗ್ರಹಗಳ ಮೂರ್ತಿಗೆ ಅಭಿಷೆಕ ಪೂಜೆ ಹಾಗೂ ನಾಗದೇವತೆ, ಬನ್ನಿಮಹಾಕಾಳಮ್ಮ, ಪೂಜೆ ನೇರವೆರಿಸಿದರು. ಇದೆ ವೆಳೆ ಸತ್ಯನಾರಾಯಣ ಪೂಜೆಯನ್ನು ಸುಮಿತ್ರಾ ಪುಂಡಲೀಕಪ್ಪದಾಸರ ದೇವಗೊಂಡನಕಟ್ಟಿ ಕುಟುಂಬದವರು ನೇರವೆರಿಸಿದರು. ನೂರಾರು ಜನರು ದೇವರ ದರ್ಶನ ಪಡೆದ್ದರು. ಬಂದ ಭಕ್ತಾದಿಗಳಿಗೆ ಸತ್ಯನಾರಾಯಣ ಅಭೀಷೆಕದ ಪ್ರಸಾದವನ್ನು ನೀಡಲಾಯಿತು. 

ಈ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಹನುಮಂತಪ್ಪ. ಟಿ.ಮುಕ್ತೇನಹಳ್ಳಿ, ಮಾರುತಿ ಗರಡಿಮನಿ, ನೀಲಪ್ಪ ಕುಮಾರ​‍್ಪನವರ, ಪರಶುರಾಮ ಅಗಡಿ, ರಾಮಣ್ಣ ವೈದ್ಯ, ಚನ್ನವೀರಯ ಸ್ವಾಮಿ, ಮಂಜುಳ ಕುಮಾರ​‍್ಪನವರ, ನೇತ್ರ ವರದಾ, ಚುಂಚಾನವರ, ಪ್ರೇಮಾ ಶೆಟ್ಟಿ, ನಾಗೇಶ ದೇವರೆಡ್ಡಿ ಪ್ರವೀಣ ಗುತೂರು ಗುರುನಾಥದಾಸರ ವಿಟ್ಟಲ ದಾಸರ, ಶಕುಂಲಮ್ಮ ರಾಮಪ್ಪ ರಾಧಮ್ಮ ಚನ್ನಬಸಮ್ಮ ಕಾಮಣ್ಣನವರ, ನೇತ್ರಾ ಹರಿಹರ ಹಾಗೂ ಹಿರಿಯ ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ