ಫೆ.31ರಂದು ಸಿದ್ಧೇಶ್ವರ ಶ್ರೀಗಳಿಗೆ ಗುರು ನಮನ
ಲೋಕದರ್ಶನ ವರದಿ,
ಜಮಖಂಡಿ18: ಈಚೆಗೆ ಲಿಂಗೈಕ್ಯರಾಗಿರುವ ವಿಜಯಪುರ ಜ್ಞಾನಯೋಗಶ್ರಮದ ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳಿಗೆ ಗುರು ನಮನ ಸಲ್ಲಿಸಲು ನಗರದ ಐತಿಹಾಸಿಕ ಪೋಲೊ ಮೈದಾನದಲ್ಲಿ ಫೆ.31 ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.
ನಗರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳ ಅಧ್ಯಕ್ಷತೆಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಯಿತು.
ಜಮಖಂಡಿ ಉಪವಿಭಾಗದಲ್ಲಿ ಬರುವ ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ ತಾಲ್ಲೂಕುಗಳು ಹಾಗೂ ಮಹಾಲಿಂಗಪುರದ ಜನತೆಯನ್ನು ಒಗ್ಗೂಡಿಸಿ ಈ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮವನ್ನು ಅತ್ಯಂತ ಸರಳ ಮತ್ತು ಶ್ರದ್ಧಾಭಕ್ತಿಯಿಂದ ಮಾತ್ರ ಸಂಘಟಿಸಲಾಗುವುದು. ಯಾವುದೇ ಅದ್ಧೂರಿತನ ಅಥವಾ ವಿಜೃಂಭಣೆ ಇರುವುದಿಲ್ಲ ಎಂದುರು.
ಎಲ್ಲ ಗ್ರಾಮಗಳ ಪ್ರಮುಖರ ಮುಖಾಂತರ ಕಾರ್ಯಕ್ರಮದ ಕುರಿತು ಪ್ರತಿಯೊಂದು ಗ್ರಾಮದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲು ಹಾಗೂ ಪೂಜ್ಯರ ಭಾವಚಿತ್ರವುಳ್ಳ ಪ್ರಕಟಣೆಯನ್ನು ಹೊರಡಿಸಿ ಕಾರ್ಯಕ್ರಮದ ಮಾಹಿತಿ ನೀಡಲಾಗುವುದು. ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗುವುದು. ಜಮಖಂಡಿ ನಗರ ಮತ್ತು ವಿವಿಧ ಗ್ರಾಮಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಪೂಜ್ಯರುಗಳಿಗೆ ಮಾತ್ರ ವೇದಿಕೆಯ ಮೇಲೆ ಅವಕಾಶ ನೀಡಲಾಗುವುದು. ಯಾವುದೇ ಜನಪ್ರತಿನಿಧಿಗಳು ಅಥವಾ ರಾಜಕಾರಣಿಗಳಿಗೆ ವೇದಿಕೆಯ ಮೇಲೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಜಮಖಂಡಿ ಪರವಾಗಿ ಪ್ರೊ.ಬಸವರಾಜ ಕಡ್ಡಿ ಅವರು ಮಾತ್ರ ಸಿದ್ಧೇಶ್ವರ ಶ್ರೀಗಳ ಕುರಿತು ಗುರು ನಮನ ಹಂಚಿಕೊಳ್ಳಲು ಅನುವು ಮಾಡಿಕೊಡಲಾಗುವುದು. ಮೂರ್ನಾಲ್ಕು ಜನ ಮಹಾಸ್ವಾಮೀಜಿಗಳಿಗೆ ಮಾತ್ರ ಗುರು ನಮನ ಸಲ್ಲಿಸಲು ಅವಕಾಶ ಇರಲಿದೆ.
ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲು ಮೈಸೂರಿನ ಸುತ್ತೂರು ಮಠದ ಶ್ರೀಗಳನ್ನು ಆಹ್ವಾನಿಸಲು ಒಂದೆರಡು ದಿನಗಳಲ್ಲಿ ಮೂರ್ನಾಲ್ಕು ಜನ ಗಣ್ಯರು ಮೈಸೂರಿಗೆ ತೆರಳಲು ಸಹ ಸಭೆಯಲ್ಲಿ ನಿರ್ಧರಿಸಲಾಯಿತು.
ವಿಧಾನ ಪರಿಷತ್ನ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಕನ್ನಡ ಸಂಘದ ಅಧ್ಯಕ್ಷ ಅರುಣಕುಮಾರ ಶಹಾ, ರೈತ ಮುಖಂಡ ಬಸವರಾಜ ಸಿಂಧೂರ, ನಿವೃತ್ತ ಶಿಕ್ಷಕ ಕೆ.ಕೆ. ತುಪ್ಪದ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಮನಗೂಳಿ, ಪುರಸಭೆ ಮಾಜಿ ಅಧ್ಯಕ್ಷ ಆರ್.ಎಸ್. ಅಕ್ಕಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಏಗಪ್ಪ ಸವದಿ, ಜಿಲ್ಲಾ ಬಿಜೆಪಿ ಪಕ್ಷದ ಮಹಿಳಾ ಅಧ್ಯಕ್ಷೆ ಡಾ,ವಿಜಯಲಕ್ಷ್ಮೀ ತುಂಗಳ, ಅರ್ಬನ್ ಬ್ಯಾಂಕ್ ನಿದರ್ೇಶಕಿ ವೈಶಾಲಿ ಗೊಂದಿ, ಗೀತಾ ಸೂರ್ಯವಂಶಿ ಸೇರಿದಂತೆ ಅನೇಕರು ಉಪಸ್ಥಿತರಿದರು.