ಇಂಡಿ

ಗುಜರಾತ್ ಚುನಾವಣೆ: ಬಿಜೆಪಿ ಪಕ್ಷ ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಗುಜರಾತ್ ಚುನಾವಣೆ: ಬಿಜೆಪಿ ಪಕ್ಷ ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಇಂಡಿ ಮಂಡಲ ಬಿಜೆಪಿ ಕಾರ್ಯಕರ್ತರು ಗುರುವಾರ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಜಯಗಳಿಸಿದ ಪ್ರಯುಕ್ತ ಸಿ

ಇಂಡಿ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಜಯಗಳಿಸಿದ ಪ್ರಯುಕ್ತ ಇಂಡಿ ಮಂಡಲ ಬಿಜೆಪಿ ಕಾರ್ಯಕರ್ತರು ಗುರುವಾರ ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಹಾಗೂ ಬಿಜೆಪಿ ಜಿಲ್ಲಾ ರೈತಮೋರ್ಚ್  ಅಧ್ಯಕ್ಷ ಕಾಸುಗೌಡ ಬಿರಾದಾರ, ಬಿಜೆಪಿ ಮುಖಂಡ ಅನಿಲ ಜಮಾದಾರ ಸೇರಿದಂತೆ ಮತ್ತಿತರರು ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದು. ಗುಜರಾತ್ ಚುನಾವಣೆ ಮುಂದಿನ ಕರ್ನಾಟಕ ಚುನಾವಣೆಯ ದಿಕ್ಸೂಚಿಯಾಗಲಿದೆ. ಮುಂದೆ ಕನರ್ಾಟಕದಲ್ಲಿಯೂ ಸಹ ಬಿಜೆಪಿ ಪಕ್ಷ ಗುಜರಾತ್ನಂತೆ ಅಧಿಕಾರ ಹಿಡಿಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕಲ್ಲಿ ಸಹ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿ ಸರಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು. ಬಿಜೆಪಿ ಸರಕಾರ ರೈತರ ಹಾಗೂ ಹಿಂದುಳಿದವರ ಬೆನ್ನೆಲುಬಾಗಿ ನಿಂತಿದೆ ಎಂದರು.

ಸಿದ್ದಲಿಂಗ ಹಂಜಿಗಿ, ಶೀಲವಂತ ಉಮರಾಣಿ, ದೇವೇಂದ್ರ ಕುಂಬಾರ, ಅನಿಲಗೌಡ ಬಿರಾದಾರ, ಧರ್ಮರಾಜ ಮದರಖಂಡಿ, ಮಾಹದೇವ ಗೂಡಡಗಿ, ಅಶೋಕ ಅಕಲಾದಿ, ಸಂಜೀವ ದಶವಂತ, ಶಾಂತು ಕಂಬಾರ, ಸೋಮು ನಿಂಬರಗಿಮಠ, ಯಲ್ಲಪ್ಪ ಹದರಿ ರಾಜಶೇಖರ ಯರಗಲ, ದತ್ತಾ ಬಂಡೆನವರ, ಮಲ್ಲು ವಾಲಿಕಾರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.


ಸುದ್ದಿ ಓದಿ