ಬ್ಯಾಡ್ಗಿ

ಅತಿಥಿ ಉಪನ್ಯಾಸಕರ ಖಾಯಂ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

ಅತಿಥಿ ಉಪನ್ಯಾಸಕರ ಖಾಯಂ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ

ಬ್ಯಾಡಗಿ:ಅತಿಥಿ ಉಪನ್ಯಾಸಕರ ಖಾಯಂ ನೇಮಕಾತಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ  ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ತಾಲೂಕ ಘಟಕದ ವತಿಯಿಂದ ಬ್ಯಾಡಗಿ ಹಾಗೂ ಚಿಕ್ಕಾಬಾಸೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನಿರ್ಧಿಷ್ಟಾವಧಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

 ಈ ವೇಳೆ ಮಾತನಾಡಿದ ಎಫ್.ಎಚ್.ಗಿಡ್ಡಣ್ಣನವರ ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ   ಕಾಲೇಜುಗಳು ಹಲವು ವರ್ಷಗಳಿಂದ 14567 ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ, ಆದರೆ ಇಂದಿಗೂ ನಮ್ಮನ್ನು ಖಾಯಂ ನೇಮಕಾತಿ ಮಾಡಿಕೊಳ್ಳುವ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಅರ್ಹತೆ ಇದ್ದವರನ್ನು ಮಾಡಿಕೊಳ್ಳಲೇಬೇಕು: ಸರ್ಕಾರಕ್ಕೆ ನಮ್ಮನ್ನು ಅತಿಥಿ ಶಿಕ್ಷಕರನ್ನಾಗಿ ಮಾಡಿಕೊಳ್ಳಲು ಬರುತ್ತದೆ, ಆದರೆ ಅರ್ಹತೆ ಇದ್ದರೂ ನಮ್ಮನ್ನು ಖಾಯಂ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನೂತನ ರಾಷ್ಟ್ರೀಯ ಶಿಕ್ಷಣನೀತಿ ಜಾರಿಗೆ ಬಂದಿದೆ ಹೀಗಾಗಿ ನೂರಾರು ಕಾಲೇಜುಗಳಲ್ಲಿ ಅನೇಕ ಪ್ರಮುಖ ವಿಷಯಗಳನ್ನು ಕಲಿಸಲು ಉಪನ್ಯಾಸಕರಿಲ್ಲ ಅದಾಗ್ಯೂ ಅತಿಥಿ ಉಪನ್ಯಾಸಕರೇ ಎಲ್ಲವನ್ನೂ ನಿಭಾಯಿಸುತ್ತಿದ್ದು ಕೂಡಲೇ ಖಾಯಂ ನೇಮಕಾತಿಗೊಳಿಸುವಂತೆ ಆಗ್ರ ಹಿಸಿದರು.

ವಯಸ್ಸು ಮೀರುತ್ತಿದೆ: ಡಾ.ಎ.ಸಿ.ಅಪ್ಪಾಜಿ ಮಾತನಾಡಿ ಕಳೆದೊಂದು ದಶಕದಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾ ಸಕರ ಬದುಕು ಅತಂತ್ರವಾಗಿದೆ, ಅತಿಥಿ ಶಿಕ್ಷಕರ ನಮ್ಮೆಲ್ಲರ ನೇಮಕಾತಿ ವಯಸ್ಸನ್ನೂ ಸಹ ಮೀರುತ್ತಿದ್ದೇವೆ ಖಾಸಗಿ ಕಾಲೇಜುಗಳಲ್ಲಿ ಲಕ್ಷಗಟ್ಟಲೇ ಹಣ ಕೊಟ್ಟು ಸೇರಿಕೊಳ್ಳುವಂತೆ ಆರ್ಥಿಕ ಶಕ್ತಿಯೂ ನಮ್ಮಲ್ಲಿಲ್ಲ ಪದವಿ ಕಾಲೇಜುಗಳ ಅಸ್ತಿತ್ವ ಉಳಿಸಿಕೊಳ್ಳುಬೇಕು ಎಂದಾದಲ್ಲಿ ಅತಿಥಿ ಎಂಬ ಅನಿಷ್ಟ ಪದ್ಧತಿಗಳಿಗೆ ಕೊನೆ ಹೇಳುವ ಮೂಲಕ ನಮ್ಮ ಸೇವೆ ಖಾಯಂಗೊಳಿಸುವಂತೆ ಆಗ್ರಹಿಸಿದರು. 

ವಿರೋಧ ಪಕ್ಷದಲ್ಲಿದ್ದ ಧ್ವನಿ ಈಗೇಕಿಲ್ಲ:  ಅಮಿತಕುಮಾರ ಮಾತನಾಡಿ, ನಮ್ಮ ಸರ್ಕಾರ ಬಂದರೆ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಅಷ್ಟೇ ಏಕೆ..? ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹರಿಸುವುದಾಗಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದನ್ನು ಒಂದೊಮ್ಮೆ ಪರಿಶೀಲಿಸಿಕೊಂಡು ನಮ್ಮನ್ನು ಖಾಯಂಗೊಳಿಸು ವಂತೆ ಆಗ್ರಹಿಸಿದರು.

 ಒಂದು ವೇಳೆ ಅತಿಥಿ ಉಪನ್ಯಾಸಕರಿಗೆ ಸೇವೆ ಖಾಯಂಗೊಳಿಸದಿದ್ದರೇ ನ.23 ರಿಂದ ರಾಜ್ಯಾದಂತ್ಯ ಸ.ಪ್ರ.ದ. ಕಾಲೇ ಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ, ಅನಿರ್ಧಷ್ಟಾವಧಿ ಹೋರಾಟ ವನ್ನು ಹಂತಹಂತವಾಗಿ ಹಮ್ಮಿಕೊಳ್ಳಲು ನಿರ್ಧರಿಸಿದ್ದು ಕೂಡಲೇ ಸ್ಪಂದಿಸುವಂತೆ ಮನವಿ ಮಾಡಿದರು. ಈ ವೇಳೆ ಪಿ.ಐ.ಮುಳಗುಂದ, ಎಚ್.ಕೆ.ಚಂದ್ರಾನಾಯ್ಕ, ಯಶೋದಾ ಅಣಜಿಗೌಡ್ರ, ಡಾ.ರಾಧಿಕಾ ಮಿಳ್ಳಿ, ಕೆ.ಎಸ್.ಲೀಲಾವತಿ ಭೀಮಪ್ಪ ಮೂಡಲದವರ, ಮಂಜುನಾಥ ಗೋಣೆಮ್ಮನವರ, ಮೃತ್ಯಂಜಯ, ಬಿ.ಪಿ.ಪಾಟೀಲ ಇನ್ನಿತರರಿದ್ದರು.


ಸುದ್ದಿ ಓದಿ