ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಕಾರ್ಯಕ್ರಮ
ರಾಣಿಬೆನ್ನೂರು 29: ಶಿವಶರಣರ ಜೀವನ ಚರಿತ್ರೆ ಕೇಳುವ ಮೂಲಕ ನೆಮ್ಮದಿಯ ಬದುಕಿಗೆ ಪುರಾಣ ಪ್ರವಚನಗಳು ಮಾರ್ಗವಾಗುತ್ತದೆ ಎಂದು ಶರಣ ಗದಿಗೆಯ್ಯಸ್ವಾಮಿ ಹಿರೇಮಠ ಹೇಳಿದರು.
ಇಲ್ಲಿಯ ಬೀರೇಶ್ವರ ನಗರದ ವೀರಭದ್ರೇಶ್ವರ ಸಾಂಸ್ಕೃತಿಕ ಸೇವಾ ಸಮಿತಿಯವರು ಏರಿ್ಡಸಿದ್ದ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಇಂದು ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮರೆಮಾಚುತ್ತಿರುವುದು ದುರಂತವೆ ಸರಿ. ಶರಣರ ತತ್ವ, ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ನಮ್ಮ ಕಲೆ, ಸಂಸ್ಕೃತಿ, ಸಂಗೀತಗಳನ್ನು ಉಳಿಸಿ ಬೆಳೆಸುವ ಗುರುತುರ ಜವಾಬ್ದಾರಿ ನಮ್ಮದಾಗಬೇಕು ಎಂದರು.
ರಾಜಣ್ಣ ಮೊಟಗಿ, ಜಿ.ಜಿ.ಹೊಟ್ಟಿಗೌಡ್ರ, ಜಿ.ಬಿ.ಮಾಸಣಗಿ, ಈರಣ್ಣ ಮಾಕನೂರು, ಎನ್.ಜಿ.ಬದಾಮಿ, ಗುಡ್ಡಪ್ಪ ಹಿಂದಿನಮನಿ, ಮೌನೇಶ ತ್ರಾಸದ ಸ್ಭೆರಿದಂತೆ ಮತ್ತಿತರರು ಇದ್ದರು.