ಸಮೂಹ ಬೋಧನಾ ಶಿಬಿರ: ರಂಗೋಲಿ ಸ್ಪರ್ಧೆ
ಲೋಕದರ್ಶನ ವರದಿ
ಬೈಲಹೊಂಗಲ 18: ತಾಲೂಕಿನ ನಯಾನಗರ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ, ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಸಮೂಹ ಬೋಧನಾ ಶಿಬಿರದಲ್ಲಿ ಎಂಟು ಮತ್ತು ಒಂಬತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಏರಿ್ಡಸಿದ್ದರು.
ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಮುಖ್ಯೋಪಾಧ್ಯಾಯ ಎನ್ ಆರ್ ಮಾಳಣ್ಣವರ, ಸಮೂಹ ಬೋಧನಾ ಶಿಬಿರದ ಮಾರ್ಗದರ್ಶಕರಾದ ಎನ್ ಡಿ ಚಿನ್ನಪ್ಪಗೌಡರ, ಶಿಕ್ಷಕರಾದ ಬಿ. ವ್ಹಿ. ಪತ್ತಾರ,ಎಸ್. ಎಮ್. ಅಂಗಡಿ ಸೇರಿದಂತೆ ಶಾಲೆಯ ಭೋಧಕ ಮತ್ತು ಬೋಧಕೆತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.