ಯರಗಟ್ಟಿ

ಹಸಿರು ಗೊಬ್ಬರದಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ: ಡಾ. ವಿ. ಆಯ್. ಬೆಣಗಿ

ಹಸಿರು ಗೊಬ್ಬರದಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ: ಡಾ. ವಿ. ಆಯ್. ಬೆಣಗಿ

ಯರಗಟ್ಟಿ : ಸ್ಥಳಿಯ ಶ್ರೀ ಮಹಾಂತದುಂಡೀಶ್ವರ ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ ಯರಗಟ್ಟಿ ತಾಲೂಕಾ ಘಟಕದಿಂದ ಹಾಗೂ ಶ್ರೀಮಠ ಆಶ್ರಯದಲ್ಲಿ ಆಯೋಜಿಸಿದ್ದ 228ನೇ ಮಾಸಿಕ ಶಿವಾನುಭ ಗೋಷಿಯ ಕಾರ್ಯಕ್ರಮವನ್ನು ಪೂಜ್ಯರು ಹಾಗೂ ಗಣ್ಯ ಮಾನ್ಯರು  ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿಶ್ರಾಂತ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ವಿ. ಆಯ್. ಬೆಣಗಿ ಹಿಂಗಾರು ಮಳೆ ಪ್ರವೇಶಕ್ಕೆ ರೈತಾಪಿ ಸಮುದಾಯ ಕಾಯುತ್ತ ಇದೆ. ಸದ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿರುವ ಮಳೆಗೆ ಆಯಾ ಭಾಗದ ರೈತರು ಹೊಲ ಹಸನು ಮಾಡುವ ಕಾಯಕವನ್ನು ಆರಂಭಿಸಿದ್ದಾರೆ. ರಾಸಾಯನಿಕ ಕೃಷಿ ಮಾಡುವವರು ಈಗಾಗಲೇ ಗೊಬ್ಬರ ಮತ್ತು ಬಿತ್ತನೆ ಬೀಜ ಪಡೆಯುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ, ಸಾವಯವ ಬೇಸಾಯಗಾರರು ಆರೋಗ್ಯಕರ ತಯಾರಿ ಶುರು ಮಾಡಿದ್ದಾರೆ. 

ದವಸ-ಧಾನ್ಯ ಬೆಳೆಯುವ ರೈತರು ಸಾಮಾನ್ಯವಾಗಿ ಹಟ್ಟಿಗೊಬ್ಬರವನ್ನ ಪೌಷ್ಟಿಕಾಂಶವಾಗಿ ಬಳಸುತ್ತಾರೆ. ಇದರೊಂದಿಗೆ ಹಸಿರು ಗೊಬ್ಬರವನ್ನು ಬಳಸುವವರೂ ಇದ್ದಾರೆ. ತೋಟಗಾರಿಕೆ ಬೆಳೆಯಲ್ಲಿ ಇದನ್ನು ಹಸಿರು ಮುಚ್ಚಿಗೆ ಅಥವಾ ಜೀವಂತ ಮುಚ್ಚಿಗೆ ಎನ್ನುವುದಾಗಿಯೂ ಹೇಳುತ್ತಾರೆ. ಹಸಿರು ಮುಚ್ಚಿಗೆಯಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎನ್ನುವುದು ಈ ವಿಧಾನವನ್ನು ಅಳವಡಿಸಿಕೊಂಡಿರುವ ರೈತರ ಅನುಭವ. ಹಸಿರು ಗೊಬ್ಬರದ ಕುರಿತಾದ ಒಂದಷ್ಟು ಮಾಹಿತಿ ಮತ್ತು ರೈತರ ಅನುಭವ ಇಲ್ಲಿದೆ. 

ಸಾಮಾನ್ಯವಾಗಿ ಸಾವಯವ ಕೃಷಿಯಲ್ಲಿ ಪ್ರಾಕೃತಿಕವಾಗಿ ದೊರೆಯುವ ಯಾವ ಪದಾರ್ಥವೂ ನಿರುಪಯುಕ್ತ ಅಲ್ಲ. ನಮ್ಮ ಕಾಲಬುಡಕ್ಕೆ ದಿನ ಎಡತಾಕುವ ಕಳೆ ಗಿಡವೂ ಹೇರಳ ಪೋಷಕಾಂಶ ಒದಗಿಸುತ್ತದೆ. ಇಂತಹ ಕಳೆ ಗಿಡಗಳಿಂದ ರಸಗೊಬ್ಬರ ಬಳಕೆಯಿಂದ ಸಿಗುವ ಪೋಷಕಾಂಶದಷ್ಟೇ ತಾಕತ್ತು ದೊರೆಯುತ್ತದೆ ಎನ್ನುವುದು ಸಂಶೋಧನೆಯಿಂದ ಸಾಬೀತಾಗಿದೆ. 

ಇದಕ್ಕೊಂದು ನಿದರ್ಶನ ಪಾಥರ್ೇನಿಯಂ ಸ್ಥಳೀಯವಾಗಿ ಕಾಂಗ್ರೆಸ್, ಕಮ್ಯುನಿಸ್ಟ್, ಲಂಟಾನಾ ಎಂದು ಕರೆಸಿಕೊಳ್ಳುವ ಇದಕ್ಕೆ ಯುಪಟೋರಿಯಂ ಎಂದೂ ಹೇಳುತ್ತಾರೆ. ಇದರ ಸಸ್ಯ ಶಾಸ್ತ್ರೀಯ ಹೆಸರು ಕ್ರೋಮೋಲೀನಾ ಒಡೊರಟ. ಪಶ್ಚಿಮಘಟ್ಟ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಾಣುವ ಈ ಸಸ್ಯಗಳನ್ನು ಅನೇಕರು ನಿಷ್ಟ್ರಯೋಜಕ ಎಂದು ಭಾವಿಸಿದ್ದಿರಿ ಎಂದು ಹೇಳಿದರು.

ಸಾನಿಧ್ಯ ವಹಿಸಿ ಕಾಯಕ ಪ್ರಸಾದದ ಬಗ್ಗೆ ಆಶರ್ೀವಚನನೀಡಿದರು ಈ ಸಂದರ್ಭದಲ್ಲಿ ಎಂ. ಬಿ. ನಂದಿಮಠ, ಅಶೋಕ ಎಮ್. ಹಾದಿಮನಿ, ಮಹಾಂತೇಶ ಜಕಾತಿ, ಶಶಿಕಾಂತ ಹಾದಿಮನಿ, ಶಿವಾನಂದ ಯರಗಣವಿ, ವಿ. ಎಂ. ಮರಡಿ, ಗೌರವ ಸನ್ಮಾನಿತರಾದ ಅಪ್ಪಾಸಾಹೇಬ ಮನಗೂಳಿ, ಬಸವರಾಜ ಮಾನೆ, ಎಸ್. ಬಿ. ಕಾಂಬಳೆ, ಡಾ. ಎಮ್. ಎನ್. ಮಲಾವಡಿ, ಪಿ. ಜೆ. ಸತ್ತಿಗೇರಿ, ವಿಠ್ಠಲ ಮರಾಠೆ, ಸಿ. ಡಿ. ಹಾದಿಮನಿ, ವಾಯ್. ಹೆಚ್. ಶೇರಿ, ಭಕ್ತಿ ದಾಸೋಹಿಗಳಾದ ತುಕಾರಾಮ ಶಿಂಧೆ, ಶೋಭಾ ಶಿಂಧೆ ಸೇರಿದಂತೆ ಶರಣ ಸಾಹಿತ್ಯ ಪರಿಷತ ಹಾಗೂ ಅಕ್ಕನ ಬಳಗದ ಅದಾಧಿಕಾರಿಗಳು ಶ್ರೀಮಠ  ಶರಣ ಶರಣೆಯರು ಉಪಸ್ಥಿತರಿದ್ದರು. ಎಸ್.  ಆರ್. ತೋಟಗಿ ಸ್ವಾಗತಿಸಿ ಶಕುಂತಲಾ ಕರಾಳೆ ವಂದಿಸಿದರು. 

 

ಸುದ್ದಿ ಓದಿ