ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರು: ಶಾಸಕ ಬಳ್ಳಾರಿ
ಬ್ಯಾಡಗಿ: ತಾಲೂಕಿನ ಹೊಸ ಹಾಗೂ ಹಳೇಗುಂಗುರುಕೊಪ್ಪ ಗ್ರಾಮಗಳಿಗೆ ತಡಸ ಗ್ರಾಮದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ 3.27ಕೋಟಿ ರೂಗಳ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ತಾಲೂಕಿನ ಹಳೇಗುಂಗುರು ಕೊಪ್ಪ ಗ್ರಾಮದಲ್ಲಿ ಪಿಎಂಜಿಎಸ್’ವೈ ಇಲಾಖೆಯ ವತಿಯಿಂದ 37ಲಕ್ಷ ರೂ. ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಹಳೇಗುಂಗುರುಕೊಪ್ಪ -ಹೊಸಗುಂಗುರು ಕೊಪ್ಪ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಡಸ- ಹಳೇಗುಂಗುರು ಕೊಪ್ಪ ರಸ್ತೆಗೆ 250ಲಕ್ಷರೂ, ತಡಸ -ಹೊಸಗುಂಗುರುಕೊಪ್ಪ ರಸ್ತೆಗೆ 40ಲಕ್ಷರೂ ಹಾಗೂ ಹಳೇಗುಂಗುರುಕೊಪ್ಪ -ಹೊಸಗುಂಗುರುಕೊಪ್ಪ ರಸ್ತೆಗೆ 37ಲಕ್ಷರೂ ಸೇರಿದಂತೆ ಒಟ್ಟು 3.27 ಕೋಟಿ ರೂಗಳ ಅನುದಾನವನ್ನು ಒದಗಿಸಲಾಗಿದ್ದು, ಈಗಾಗಲೇ ಎರಡು ಕಾಮಗಾರಿಗಳಿಗೆ ಪಿಆರಿ್ಡ ಹಾಗೂ ಪಿಎಂಜಿಎಸ್’ವೈ ಇಲಾಖೆಯ ವತಿಯಿಂದ ಚಾಲನೆ ನೀಡಿದ್ದು, ಲೋಕೋಪಯೋಗಿ ಇಲಾಖೆಯ ವತಿಯಿಂದ ಟೆಂಡರ್ ಪ್ರಕ್ರಿಯೆಯಲ್ಲಿರುವ 250ಲಕ್ಷರೂ ವೆಚ್ಚದ ತಡಸ -ಹಳೇಗುಂಗುರುಕೊಪ್ಪ ರಸ್ತೆ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ರೂಪಾ ಸಣ್ಣಬಾರ್ಕಿ ವಹಿಸಿದ್ದರು. ಟಿಎಪಿಎಂಎಸ್ ಸದಸ್ಯ ಚಂದ್ರ್ಪ ದೊಡ್ಡಮನಿ, ಗ್ರಾಪಂ ಸದಸ್ಯ ದೀಲೀಪ್ ಮೇಗಳಮನಿ, ಮುಖಂಡರಾದ ಭರಮಪ್ಪ ಹೊನ್ನತ್ತಿ, ಹನುಮಂತಪ್ಪ ಇಮ್ಮಡಿ, ಹೊನ್ನಪ್ಪ ಸಣ್ಣಬಾರ್ಕಿ, ಕಿರಿಯ ಅಭಿಯಂತರ ಶ್ರೀಧರ, ಗುತ್ತಿಗೆದಾರ ದೂದಸಾಬ್ ಹರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.