ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ: ಸಂಭ್ರಮಿಸಿದ ಶಾಲಾ ಮಕ್ಕಳು
ರಾಣೇಬೆನ್ನೂರು 30: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥವನ್ನು ನಗರಕ್ಕೆ ಇತ್ತೀಚೆಗೆ ಆಗಮಿಸಿತ್ತು. ತಹಶೀಲ್ದಾರ್ ಅವರ ಕಚೇರಿಯ ಹತ್ತಿರ ಸ್ವಾಗತಿಸುವದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಲಿಂಗಯ್ಯ ಹಿರೇಮಠ, ಹಾಗೂ ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಆರ್ ಎಚ್ ಭಗವಾನ್ ಅವರು ಪೂಜೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಕನ್ನಡ ಜ್ಯೋತಿ ರಥಯಾತ್ರೆಗೆ ಡಿಜೆ ಸಹಿತ ವಿವಿಧ ಕಲಾ ತಂಡಗಳಿಂದ ನೃತ್ಯ, ಹಾಡು, ಮೇಳ, ಡೊಳ್ಳು, ವೀರಗಾಸೆ, ಶಾಲಾ ವಿದ್ಯಾರ್ಥಿಗಳಿಂದ ಕುಣಿತ ಎಲ್ಲವೂ ಮೆರವಣಿಗೆಗೆ ವಿಶೇಷ ಮೆರುಗು ನೀಡಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥ ಯಾತ್ರೆಯು ಪ್ರವಾಸಿ ಮಂದಿರ ತಲುಪಿತು.
ಈ ಸಂದರ್ಭದಲ್ಲಿ, ಬಿಇಓ ಶಾಮಸುಂದರ ಅಡಿಗ, ಸಮಾಜ ಸೇವಕ ಮಂಜನಗೌಡ ಪಾಟೀಲ್, ಜಿ. ಪಂ. ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ನಗರಸಭಾ ಸದಸ್ಯ ಪುಟ್ಟಪ್ಪ ಮರಿಮ್ಮನವರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಪಿ. ಶಿಡೇನೂರು, ಸಂಘಟನಾ ಕಾರ್ಯದರ್ಶಿ ಸುಭಾಸ ಕುರುಬರ, ತಾ. ಕ. ಸಾ. ಪರಿಷತ್ ಅಧ್ಯಕ್ಷ ಪ್ರಭಾಕರ ಎನ್. ಶಿಗ್ಲಿ, ನಿಕಟಪೂರ್ವ ಅಧ್ಯಕ್ಷ ವೀರೇಶ ಜಂಬಿಗಿ, ಪೂರ್ವಾಧ್ಯಕ್ಷರಾದ ಎ. ಬಿ. ರತ್ನಮ್ಮ, ಶಿವಾನಂದ ಸಂಗಾಪುರ, ಗೌರವ ಕಾರ್ಯದರ್ಶಿ, ಜಗದೀಶ ಮಳಿಮಠ, ಎಚ್ ಎಚ್ ಜಾಡರ, ಕೋಶಾಧ್ಯಕ್ಷ ಎಚ್.ಎಸ್. ಮುದಿಗೌಡ್ರ, ಗಣ್ಯ ವರ್ತಕರಾದ ಜಿ. ಜಿ. ಹೊಟ್ಟಿಗೌಡ್ರ, ಚಂದ್ರಶೇಖರ ಮಡಿವಾಳರ, ಗುಡ್ಡಪ್ಪ ಮಾಳಗುಡ್ಡಪ್ಪನವರ, ಗಂಗಮ್ಮ ಹಾವನೂರ, ಇಂದಿರಾ ಬಾರಂಗಿ, ಶೋಭಾ ನಾಗನಗೌಡರ, ನಿರ್ಮಲಾ ಲಮಾಣಿ, ಹಿರಿಯರಾದ ವಾಯ್. ಯು.ತಳವಾರ, ಎಚ್. ಎಂ. ನಂದಿಹಳ್ಳಿ, ಬಸನಗೌಡ ಉಮ್ಮನಗೌಡರ, ಎಚ್ ಆರ್ ವೆಂಕಣ್ಣವರ, ಡಾ. ಕಾಂತೇಶ ಅಂಬಿಗೇರ, ಡಾ. ಕಾಂತೇಶ ಗೋಡಿಹಾಳ, ಮಾರುತಿ ತಳವಾರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಯಮ್ಮಿ, ಪಿ ವ್ಹಿ ಮಠದ, ಜಿ.ಕೆ.ಗಣೇಶ, ಮಲ್ಲೇಶಪ್ಪ ಮದ್ಲೇರ, ಬಸವರಾಜ ಸಾವಕ್ಕನವರ, ಶಿವಕುಮಾರ ಜಾಧವ, ಮಲ್ಲಿಕಾರ್ಜುನ ಸಾವಕ್ಕಳವರ, ಕಿರಣ ಗುಳೇದ ಸೇರಿದಂತೆ ಮತ್ತೆ ಮತ್ತಿತರ ಗಣ್ಯರು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಆಜೀವ ಸದಸ್ಯರು, ಕವಿ, ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು ನಗರದ ನಾಗರಿಕರು ಪಾಲ್ಗೊಂಡಿದ್ದರು.