ಶ್ಯಾಡಂಬಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ

ಶಿಗ್ಗಾವಿ 23: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ  ಗ್ರಾಮದೇವಿಯ ನೂತನ ದೇವಸ್ಥಾನ ಕಳಸಾರೋಹಣ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಎಪ್ರೀಲ್  22ರಿಂದ ಹಿಎಪ್ರೀಲ್ 26 ರವರೆಗೆ ಜರುಗಲಿದೆ. 

ನೂತನ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು  ಕುನ್ನೂರ ಗ್ರಾಮದಿಂದ ಮಹಿಳೆಯರಿಂದ ಕುಂಭ ಮೇಳದೊಂದಿಗೆ ಸಕಲ ವಾಧ್ಯ ವೈಭವದೊಂದಿಗೆ  ನೂತನ ಗ್ರಾಮದೇವಿಯ ಮೂರ್ತಿ ಮೆರವಣಿಗೆ ನಡೆಯಲಿದ್ದು ಮೂರ್ತಿಯ ಮೆರವಣಿಗೆಯು ಶ್ಯಾಡಂಬಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ  22  ರಂದು ಮುಂಜಾನೆ ಬ್ರಾಹ್ಮಿ ಮೂಹೋರ್ತದಲ್ಲಿ ಜಾತ್ರಾ ಮಂಟಪದಲ್ಲಿ ಪ್ರತಿಷ್ಟಾಪನೆಗೊಳ್ಳುವುದು,   

ಪ್ರತಿದಿನ ಸಾಯಂಕಾಲ 6 ಘಂಟೆಗೆ ಧರ್ಮ ಸಭೆ ಜರುಗಲಿದ್ದು, ಅಂದಿನ ಶ್ರೀಗಳು ದಿವ್ಯ ಸಾನಿಧ್ಯ ವಹಿಸುವರು.ಮುಖ್ಯ ಅತಿಥಿಗಳಾಗಿ ತಾಲೂಕಿನ ಜನಪ್ರತಿನಿಧಿಗಳು, ಗಣ್ಯಮಾನ್ಯರು, ಸಮಾಜ ಸೇವಕರು, ರೈತಪರ ಹೋರಾಟಗಾರರು, ಕಲಾವಿದರು ಹಾಗೂ ಶ್ಯಾಡಂಬಿ ಗ್ರಾಮದೇವಿ ದೇವಸ್ಥಾನ ಸಮೀತಿ ಅಧ್ಯಕ್ಷರು  ಸರ್ವ  ಸದಸ್ಯರು  ಹಾಗೂ ಗ್ರಾಮಸ್ಥರು ಭಾಗವಹಿಸಲಿದ್ದಾರೆ. 

ಎಪ್ರೀಲ್ 25 ರಿಂದ ಎಪ್ರೀಲ್ 26  ವರೆಗೆ ನೂತನ ದೇವಸ್ಥಾನದಲ್ಲಿ ಅರ್ಚಕರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗುವವು  ಎಂದು ಗ್ರಾಮ ದೇವಿ ದೇವಸ್ಥಾನದ ಸಮೀತಿ ಪ್ರಕಟಣೆಗೆ ಕೋರಿದ್ದಾರೆ.