ಪಕ್ಷಕ್ಕೆ ಸೇರೆ್ಡಗೊಂಡ ಗ್ರಾಮ ಪಂಚಾಯತ್ ಸದಸ್ಯರು, ದೇಶದ ಅಭಿವೃದ್ಧಿಗೆ ಅವಕಾಶ ನೀಡಿ: ಶಿವಶಂಕರ
ರಾಣೆಬೆನ್ನೂರು 04: ರಾಜಕೀಯ ನಿಂತ ನೀರಲ್ಲ ಸದಾ ಹರಿಯುವ ಗಂಗೆ ಜನಸಾಮಾನ್ಯರ ಬದುಕಿಗೆ ಆಸರೆಯಾಗುವುದೇ ರಾಜಕೀಯದ ಮುಖ್ಯ ಉದ್ದೇಶವಾಗಬೇಕು ಎಂದು ಹರಿಹರದ ಮಾಜಿ ಶಾಸಕ ಎಚ್. ಎಸ್.ಶಿವಶಂಕರ್ ಹೇಳಿದರು.ಅವರು ಇಲ್ಲಿನ ಹಳೆ ಅಂತರವಳ್ಳಿ ರಸ್ತೆಯ ಎಂ.ಎಂ. ಸಭಾಭವನದಲ್ಲಿ ನಡೆದ ಜೆಡಿಎಸ್ ಮುಖಂಡರ ಪಕ್ಷದ ಕಾರ್ಯಕರ್ತರ ಹಾಗೂ ಪಕ್ಷಕ್ಕೆ ಸೇರೆ್ಡಯಾಗುವ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದಂತಹ ತತ್ವ ಸಿದ್ಧಾಂತವಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಹೊರತುಪಡಿಸಿ ಯಾವುದೇ ಪಕ್ಷದ ರಾಜಕೀಯ ನಾಯಕರು ಚುನಾಯಿತರಾಗಲು ಸಾಧ್ಯವಾಗಿಲ್ಲ. ರಾಜ್ಯದ ಜನತೆ ಬಿಜೆಪಿ ಪಕ್ಷದ ಆಡಳಿತಕ್ಕೆ ಬೇಸತ್ತಿದ್ದಾರೆ, ಜನರು ಭ್ರಮ ನಿರಸಗೊಂಡಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಪುನ: ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿದ್ದೇವೆ ಎಂದರು.
ಭವಿಷ್ಯದ ಚುನಾವಣೆಯಲ್ಲಿ ನಮ್ಮ ಪಕ್ಷದ ಹಿರಿಯ ನಾಯಕರು ಘೋಷಿಸಿದಂತೆ, ನೀರಾವರಿಗೆ ಆದ್ಯತೆ, ವಸತಿ ರಹಿತರಿಗೆ ವಸತಿ, ಶಿಕ್ಷಣ, ವಿದ್ಯುತ್ ಸಂಪೂರ್ಣ ಸಾಲ ಮನ್ನಾ ಮತ್ತಿತರೆ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ನುಡಿದಂತೆ ನಡೆಯುವ ಜೆಡಿಎಸ್ ಇಂದಿಗೂ ಅಧಿಕಾರ ಇರಲಿ ಇಲ್ಲದೆ ಇರಲಿ ಜನರ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ವಿವರಿಸಿದರು. ಪಂಚ ಯಾತ್ರೆ ಯಶಸ್ವಿಯಾಗಿ ಸಾಗಿದೆ. ಸಂಚರಿಸಿದಲ್ಲೆಡೆಯು ರೈತರ, ಬಡವರ, ಕೂಲಿ ಕಾರ್ಮಿಕರ, ಜನಸಾಮಾನ್ಯರ, ಸರಕಾರಿ ನೌಕರರ, ಅರೆ ಸರ್ಕಾರಿ ನೌಕರರ ಅಪಾರ ಬೆಂಬಲ ಸಿಕ್ಕಿದೆ ಒಟ್ಟಾರೇ ಜನಾ ಭಿಪ್ರಾಯ ಬದಲಾವಣೆ ಕಾಣುತ್ತದೆ ನಾಡಿನ ಜನತೆ ಜೆಡಿಎಸ್ ನತ್ತ ಮುಖ ಮಾಡುತ್ತಿದ್ದಾರೆ ಎಂದರು. ವಾಣಿಜ್ಯ ನಗರ ತನ್ನ ವಾಣಿಜ್ಯ ವ್ಯವಹಾರಕ್ಕೆ ಹೆಸರುವಾಸಿಯಾಗಿದೆ ಉತ್ತಮ ಆಡಳಿತ ನಡೆಸುವ ಜನನಾಯಕರ ಅವಶ್ಯಕತೆ ಈ ಹಿಂದಿ ಗಿಂತಲೂ ಇಂದು ಬಹು ಅಗತ್ಯವಾಗಿದೆ ಎಂದ ಅವರು, ಸದಾಕಾಲ ಜನರ ಮಧ್ಯೆ ಇದ್ದು, ಜನಸೇವಕನಾಗಿ ಕರ್ತವ್ಯ ನಿಭಾಯಿಸುತ್ತಿರುವ ಮಂಜುನಾಥ್ ಗೌಡಶಿವಣ್ಣನವರ್ ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ, ಅಂತಹ ಯುವ ನಾಯಕರಿಂದ ತಾಲೂಕಿನ ಸಮಗ್ರ ಅಭಿವೃದ್ಧಿ ಸಾಧ್ಯವಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಗೌಡ ಶಿವಣ್ಣನವರ ಅವರು, ಸಮಾಜದಲ್ಲಿ ನಗರ ಮತ್ತು ತಾಲೂಕಿನ ಜನತೆ ತಮ್ಮ ಜನಪರ ಕಾರ್ಯಗಳನ್ನು ಗುರುತಿಸಿದ್ದಾರೆ. ಗೌರವಿಸಿದ್ದಾರೆ. ಸಾರ್ವಜನಿಕರ ಪ್ರೀತಿ, ವಿಶ್ವಾಸ, ಅಭಿಮಾನ, ಮತ್ತು ಅವರೆಲ್ಲರ ಅಪೇಕ್ಷೆ ಅಭಿಮಾನಿಗಳ ಸಂಘದ ಮುಖಂಡರ ಆಶಕ್ತಿ ಮತ್ತು ಬೆಂಬಲದಿಂದ ಸ್ಪರ್ಧಗಿಳಿಯಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ರಾಣೆಬೆನ್ನೂರು ತಾಲೂಕಿನ ಜನತೆ ಇಲ್ಲಿನ ಆಡಳಿತದಿಂದ ಸಂಪೂರ್ಣ ಬೇಸರಗೊಂಡಿದ್ದಾರೆ. ತಾಲೂಕಿಗೆ ಹೊಸಮುಖದ ಬೇಡಿಕೆ ಪ್ರಬಲವಾಗಿದೆ. ಬರುವ ಚುನಾವಣೆಯಲ್ಲಿ ಜಯ ಸಾಧಿಸಲು, ಕಾರ್ಯಕರ್ತರ ಪಡೆ ಬಲಪಡಿಸಲು ನಿರಂತರ ಕಾರ್ಯ ಮುಖರಾಗಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಕಮದೊಡ್, ನಿಟ್ಟೂರ್, ಅಂತರವಳ್ಳಿ ಹಲಗೇರಿ, ಸೇರಿದಂತೆ ವಿವಿಧ ಗ್ರಾಮಗಳ ಪಂಚಾಯತಿ ಸದಸ್ಯರು, ಜೆಡಿಎಸ್ ಪಕ್ಷಕ್ಕೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರೆ್ಡಗೊಂಡರು. ಸದಸ್ಯರನ್ನು ಮಾಜಿ ಶಾಸಕ ಎಚ್ಎಸ್ ಶಿವಶಂಕರ್ ಅವರು ಪಕ್ಷದ ಚಿಹ್ನೆ ಹೊತ್ತ ಶ್ಯಾಲನ್ನು ಹೊದಿಶಿ, ಗೌರವಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಸಂಸುದ್ ಖಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ್, ವಕ್ತಾರ ಮಹೇಶ ಗೌಡ, ಮಲ್ಲಿಕಾರ್ಜುನ ಹಲಗೇರಿ, ಅಬ್ದುಲ್ ಖಾದರ್ ಸುನ್ನಾ ಖಾನ್, ಪ್ರವೀಣ ಹೊದಿಗ್ಗೆರಿ, ಮಲ್ಲಿಕಾರ್ಜುನ ಅಡಿವೆಪ್ಪನವರ, ಶ್ರೀಮತಿ ಶಶಿಕಲಾ ಗೌಡಶಿವಣ್ಣನವರ, ವಿರೂಪಾಕ್ಷಪ್ಪ ಹುಲ್ಲತ್ತಿ, ಸಿದ್ದನಗೌಡ ಪಾಟೀಲ್, ಉಜ್ಜಪ್ಪ ಕಮದೋಡ, ಹೂವನ ಗೌಡ ಪಾಟೀಲ್, ಸೇರಿದಂತೆ ನೂರಾರು ಮುಖಂಡರು, ಪಕ್ಷದ ಹಿರಿಯ ಕಾರ್ಯಕರ್ತರು, ಮಂಜುನಾಥ್ ಗೌಡ ಶಿವಣ್ಣನವರ್ ಅವರ ಅಭಿಮಾನಿ ಬಳಗದ ಸದಸ್ಯರು ಕಾರ್ಯಕರ್ತರು ಪಾಲ್ಗೊಂಡಿದ್ದರು.