ಮೂರನೇ ದಿನಕ್ಕೆ ಕಾಲಿಟ್ಟ ಗ್ರಾಪಂ ಸಿಬ್ಬಂದಿಗಳ ಧರಣಿ
ಗೋಕಾಕ 29: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಗೋಕಾಕ ತಾಲೂಕಿನ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಧರಣಿಯು ಮೂರನೆ ದಿನವಾದ ಇಂದು ಸಹ ಮುಂದುವರೆದಿದ್ದು ಆದರೆ ಅಧಿಕಾರಿಗಳಾಗಲಿ ಸರಕಾರವಾಗಲಿ ಗ್ರಾಮ ಪಂಚಾಯತಿ ನೌಕರರನ್ನು ಕೋರೊನಾ ವಾರಿಯರ್ಸ ಅಂತಾ ಘೋಷಿಸಿ ಆದೇಶ ಮಾಡಲು ಹಾಗೂ 15 ನೇ ಹಣಕಾಸಿನ 4 ನೇ ಕಂತಿನ ಅನುದಾನ ಜಮೆ ಆಗಿದ್ದನ್ನು ಸಿಬ್ಬಂದಿ ವೇತನಕ್ಕಾಗಿ ಮೀಸಲಿಡಲು ನಿರ್ಧರಿಸದಿರುವುದರಿಂದ ಮುಂದಿನ ದಿನಗಳಲ್ಲಿ ಧರಣಿಯನ್ನು ಮತ್ತಷ್ಟು ತೀವೃಗೊಳಿಸಲು ನಿರ್ಣಯಿಸಲಾಗಿದೆಯೆಂದು ಗ್ರಾಮ ಪಂಚಾಯತ ನೌಕರರ ಸಂಘದ ತಾಲೂಕಾಧ್ಯಕ್ಷ ಮಡ್ಡೆಪ್ಪ ಭಜಂತ್ರಿ ತಿಳಿಸಿದ್ದಾರೆ.
ಇಗಾಗಲೇ ಕೋವಿಡ್-19 ಗೆ ಸಂಬಂಧಿಸಿದ ಎಲ್ಲ ಕೇಲಸವನ್ನು ಸ್ಥಗಿತಗೊಳಿಸಲಾಗಿದ್ದು 15 ನೇ ಹಣಕಾಸು ಯೋಜನೆಯಡಿ 4 ನೇ ಕಂತಿನ ಅನುದಾನವು ಜಮೆಯಾಗಿದ್ದರೂ ಸಿಬ್ಬಂದಿಗಳ ವೆಂಡರ್ ಖಾತೆಗೆ ಜಮೆ ಮಾಡದೇ ನಿರ್ಲಕ್ಷ ಮಾಡುತ್ತಿರುವುದರಿಂದ ವಾಟರಮನಗಳು ಹಾಗೂ ಸ್ವಚ್ಛತಾಗಾರರು ಮುಂದಿನ ದಿನಗಳಲ್ಲಿ ತಮ್ಮ ಕೆಲಸವನ್ನು ಸ್ಥಗಿತಗೊಳಿಸುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಮುಖಂಡರಾದ ಕಲ್ಲಪ್ಪ ಮಾದರ, ಕರಿಮಸಾಬ ಬಾಗವಾನ, ಧರೆಪ್ಪ ಬೆಳವಿ, ಶೀವು ನಿಲುಗಲ್,ಸುನೀಲ್ ಯಡವಣ್ಣವರ, ಮಡ್ಡೆಪ್ಪ ನಿಡಗುಂದಿ, ಮಾರುತಿ ನಾಕೋಜಿ, ಸೇರಿದಂತೆ ಅನೇಕರು 3 ನೇ ದಿನದ ಪ್ರತಿಭಟನಾ ಧರಣಿಯ ನೇತೃತ್ವವನ್ನು ವಹಿಸಿದ್ದರು.