ಇಂಡಿ

ಬಹುತೇಕ ಎಲ್ಲ ಗ್ರಾ.ಪಂಗಳಲ್ಲಿ ತ್ವರಿತಗತಿಯಲ್ಲಿ ಗ್ರಾಮ ಒನ್ ಸೇವೆ ಆರಂಭ: ಸಿಇಓ

ಬಹುತೇಕ ಎಲ್ಲ ಗ್ರಾ.ಪಂಗಳಲ್ಲಿ ತ್ವರಿತಗತಿಯಲ್ಲಿ ಗ್ರಾಮ ಒನ್ ಸೇವೆ ಆರಂಭ: ಸಿಇಓ


ಇಂಡಿ: ತಾಲೂಕಿನಲ್ಲಿ ಗ್ರಾಮ ಒನ್ ಸೇವೆಗಳ ಆರಂಭ ಬಹುತೇಕ ಎಲ್ಲ ಗ್ರಾ.ಪಂಗಳಲ್ಲಿ ತ್ವರಿತ ಗತಿಯಲ್ಲಿ ನಡೆದಿದೆ. ತಾಲೂಕಾ ವ್ಯಾಪ್ತಿಯ 49 ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು ಈಗಾಗಲೇ ಕೆಲವು ಕಡೆ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಲಾಗಿದೆ ಎಂದು ಜಿ.ಪಂ ಸಿಇಓ ರಾಹುಲ್ ಸಿಂಧೆ ಹೇಳಿದರು. 

ಬುಧವಾರ ಪ್ರತಿಕೆಯೊಂದಿಗೆ ಮಾತನಾಡಿ, ಅಭ್ಯರ್ಥಿಗಳು ಗ್ರಾಮ ಒನ್ ಕೇಂದ್ರ ತೆರೆಯಲು ಆನ್ ಲೈನ್ ಅರ್ಜಿ ಹಾಕಬೇಕು. ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಆಸಕ್ತರು  1 ಅಥವಾ 2 ಲಕ್ಷ ರೂ ಬಂಡವಾಳ ಹೂಡಿಕೆಯ ಸಾಮರ್ಥ್ಯವಿರಬೇಕು. ಪೊಲೀಸ ತಪಾಸಣೆ ಪತ್ರ ಹೊಂದಿರಬೇಕು. ಸೇವಾ ಸಿಂಧುವಿನಲ್ಲಿ ಬರುವ ಎಲ್ಲ ಇಲಾಖೆಯ ಎಲ್ಲ  100 ಸೇವೆಗಳು, ಸಕಾಲ ಸೇವೆಗಳು, ಮಾಹಿತಿ ಹಕ್ಕು ಸೇವೆಗಳು, ಮುಖ್ಯಮಂತ್ರಿಗಳ ಪರಿಹಾರ ನಿಧಿ, ಸಣ್ಣ ಬ್ಯಾಂಕಿಂಗ್ ಸೇವೆಗಳು ಲಭ್ಯ ಇವೆ ಎಂದರು. 

ಗ್ರಾಮ ಒನ್ ಕೇಂದ್ರ ಗ್ರಾ.ಪಂನ ಕೇಂದ್ರ ಸ್ಥಾನದಲ್ಲಿರಬೇಕು. ಜನರಿಗೆ ಸುಲಭದಲ್ಲಿ ಸೇವೆ ಸಿಗುವಂತಾಗಬೇಕು. ಬೆಳಗ್ಗೆ 8 ರಿಂದ ರಾತ್ರಿ 8 ರ ವರೆಗೆ ತೆರೆದಿಡಬೇಕು. 

ಡೆಸ್ಕಟಾಪ್ ಅಥವಾ ಲ್ಯಾಪಟಾಫ್, ಪ್ರಿಂಟರ್, ಬಯೋಮೆಟ್ರಿಕ್, ಸ್ಕ್ಯಾನರ, ವೆಬ್ ಕೆಮೆರಾ, ವೈಪೈ, ರೀಸೀವರ್ ಹಾಗೂ ಅಂತರ್ಜಾಲ ಸೇವೆ ಇರಬೇಕು. 

ಇದರಿಂದ ಜನರ ಸಮಯ ಹಾಗೂ ಹಣ ಉಳಿತಾಯ, ಗಂಟೆಗಟ್ಟಲೆ ದಿನವೀಡಿ ಕಾಯುವದು ತಪ್ಪುತ್ತದೆ, ಬೆಳಗ್ಗೆ 8ರಿಂದ ರಾತ್ರಿ 8 ರ ವರೆಗೆ ಸೇವೆ, ಮಧ್ಯವರ್ತಿಗಳ ಹಾವಳಿಯಿಲ್ಲ, ತಾಲೂಕು ಕೇಂದ್ರಕ್ಕೆ ಅಲೆದಾಟ ತಪ್ಪುತ್ತದೆ ಎಂದರು. 

ತಾಲೂಕಿನಲ್ಲಿ 38 ಗ್ರಾ.ಪಂ ಗಳ 49 ಕೇಂದ್ರಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಯೋಜನಾ ವ್ಯವಸ್ಥಾಪಕರು ಗ್ರಾಮ ಒನ್ ಇವರಿಗೆ ಸಂಪರ್ಕಿಸಿ.  

ನಾಗಯ್ಯ ಹಿರೇಮಠ ತಹಸೀಲ್ದಾರರು ಇಂಡಿ. 


ಸುದ್ದಿ ಓದಿ