ಬೈಲಹೊಂಗಲ

ಕೋವಿಡ ವಿರುದ್ದ ಎಲ್ಲರೂ ಕೈಜೋಡಿಸಿ- ಕಾರಜೋಳ

ಕೋವಿಡ ವಿರುದ್ದ ಎಲ್ಲರೂ ಕೈಜೋಡಿಸಿ- ಕಾರಜೋಳ
ಬೈಲಹೊಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳ ಸಭೆ ನಡೆಸಿದರು.

ಬೈಲಹೊಂಗಲ 12: ಮಹಾಮಾರಿ ಕೋವಿಡ ವಿರುದ್ದ ಎಲ್ಲರೂ ಕೈಜೋಡಿಸಿ ಹೋರಾಡಬೇಕಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ ಎಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. 

ಅವರು ಬುಧವಾರ ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ನಂತರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ತಾಲೂಕಿನಲ್ಲಿ ಗುಣಮುಖರಾದ ವ್ಯಕ್ತಿಗಳ ಸಂಖ್ಯೆಗೆ ಮತ್ತು ಪಾಜಿಟಿವ ಇರುವ ವ್ಯಕ್ತಿಗಳ ಸಂಖ್ಯೆಗೆ ಅಂತರವಿದ್ದು, ಬೇರೆ ತಾಲೂಕಿಗೆ ಹೋಲಿಸಿದರೆ ಇಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ತಾಲೂಕಾ ವಯದ್ಯಾಧಿಕಾರಿಗಳು ಈ ಕುರಿತು ಗಮನ ಹರಿಸಿ ಮುಂದೆ ಆಗುವ ಅನಾಹುತಗಳನ್ನು ನಿಯಂತ್ರಣ ಮಾಡಿ ಎಂಧು ತಾಖಿತು ನೀಡಿದರು. 

ಜಿಲ್ಲಾ ವೈದ್ಯಾಧಿಕಾರಿ ಡಾ. ಶಶಿಕಾಂತ ಮುನ್ಯಾಳ ಅವರನ್ನು ತೀವೃ ತರಾಟೆಗೆ ತೆಗೆದುಕೊಂಡ ಸಚಿವರು ಸರಿಯಾಗಿ ಕರ್ತವ್ಯ ನಿರ್ವಹಿಸುವದಾದರೆ ಮಾತ್ರ ಹುದ್ದೆಯಲ್ಲಿ ಮುಂದೆವರೆಯಿರಿ, ಸಿಬ್ಬಂದಿ ಕೊರತೆಯನ್ನು ಹೋಗಲಾಡಿಸಲು ಹೊಸ ನೇಮಕಾತಿ ಮಾಡುವಂತೆ ನಿಮಗೆ ಸರ್ಕಾರದ ವತಿಯಿಂದ ಆದೇಶವಿದ್ದರೂ ಅದನ್ನು ಸರಿಯಾಗಿ ಪಾಲನೆ ಮಾಡಿಲ್ಲ. ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ದವಾಗಿದೆ. ಇನ್ನೂ ಮೂರು ದಿನಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕ ಮಾಡಿ ಸರ್ಕಾರಕ್ಕೆ ತಿಳಿಸಬೇಕು ಇಲ್ಲವಾದಲ್ಲಿ ನಾಲ್ಕನೇಯ ದಿನ ನೀವು ಜಿಲ್ಲಾ ವೈದ್ಯಾಧಿಕಾರಿಗಳ ಹುದ್ದೆಯಲ್ಲಿ ಇರುವದಿಲ್ಲ ಅಂತಾ ಖಡಕ್ಕಾಗಿ ಸೂಚಿಸಿದರು. 

ತಾಲೂಕಾ ವೈದ್ಯಾಧಿಕಾರಿ ಡಾ. ಸಂಜಯ ಸಿದ್ದನ್ನವರ ತಾಲೂಕಿನ ಕೋವಿಡ ಸೋಂಕಿತರ ಕುರಿತು ಮಾಹಿತಿ ನೀಡಿದಾಗ ಬೈಲಹೊಂಗಲ ತಾಲೂಕಿನಲ್ಲಿ ಶೇ. 5.36 ಪ್ರತಿಶತ ಸೋಂಕಿತರು ಮೃತಪಟ್ಟಿದ್ದು ಅಲ್ಲದೆ ಯುವಕರು ಕೂಡಾ ಸಾವಿಗೆ ಶರಣಾಗಿದ್ದಾರೆ. ಈ ಕುರಿತು ತಾವು ಯಾವೆಲ್ಲ ಅಗತ್ಯ ಕ್ರಮ ಜರುಗಿಸಿದ್ದೀರಿ ಎಂದು ಪ್ರಶ್ನಿಸಿದರು. ತಕ್ಷಣ ಉತ್ತರಿಸಿದ ವೈದ್ಯಾಧಿಕಾರಿ ಯುವ ಪೀಳಿಗೆಯ ನಿರ್ಲಕ್ಷವೇ ಕಾರಣವಾಗಿದೆ ಎಂದರು. ತಹಶೀಲ್ದಾರ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಸಚಿವರು ಸಭೆಯಲ್ಲಿದ್ದ ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಸೂಚಿಸಿದರು. 

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಕಿತ್ತೂರಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವರಿಂದ ತಾಲೂಕಾ ಆಸ್ಪತ್ರೆ ಮತ್ತು ಅಲ್ಲಿ ಸೋಂಕಿತರಿಗೆ ಒದಗಿಸಲಾಗುತ್ತಿರುವ ಸವಲತ್ತುಗಳ ಬಗ್ಗೆ ಸಚಿವರು ಮಾಹಿತಿ ಪಡೆದು,  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಸೂಚಿಸಿ ಜಿಲ್ಲೆಯ ಪ್ರತಿಯೊಂದು ತಾಲೂಕಾ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು. 18 ರಿಂದ 44 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಸಿಕೆ ನೀಡುವಲ್ಲಿ ವಿಳಂಭವಾಗುತ್ತಿದೆ. ಮೊದಲನೇಯ ಲಸಿಕೆ ಪಡೆದ ವ್ಯಕ್ತಿಗಳಿಗೆ ಎರಡನೇಯ ಲಸಿಕೆ ನೀಡಲು ಇನ್ನೂ ಸ್ವಲ್ಪ ಲಸಿಕೆಯ ಅಗತ್ಯತೆ ಇದ್ದೂ ತಕ್ಷಣ ಅದನ್ನು ಪೂರೈಸುವಂತೆ ತಾಲೂಕಾ ವೈದ್ಯಾಧಿಕಾರಿಗಳು ಸಚಿವರಲ್ಲಿ ಮನವಿ ಮಾಡಿದರು. 

ಪತ್ರಕರ್ತರು, ಪೌರ ಕಾರ್ಮಿಕರು, ಅಡುಗೆ ಅನಿಲ ವಿತರಿಸುವ ಕೆಲಸಗಾರರಿಗೆ ಹಾಗೂ ಕ್ಷೌರೀಕರಿಗೆ ಆಧ್ಯತೆಯ ಮೇರೆಗೆ ಲಸಿಕೆ ನೀಡುವಂತೆ ಇದೇ ಸಂದರ್ಭದಲ್ಲಿ ಸಚಿವರು ಸೂಚಿಸಿದರು. 

ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜಿಪಂ ಸದಸ್ಯ ಶಂಕರ ಮಾಡಲಗಿ ಜಿಲ್ಲಾ ಪೊಲೀಸ ವರೀಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಓ ಧರ್ಶನ ಎಚ್.ಬಿ ಹಾಗೂ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು. 

ಉಪವಿಭಾಗಾಧಿಕಾರಿ ಶಶಿಧರ ಬಗಲಿ ಸ್ವಾಗತಿಸಿ, ವಂದಿಸಿದರು. 


 

ಸುದ್ದಿ ಓದಿ