ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರಕಾರ ಅನೇಕ ಯೋಜನೆಗಳು ಜಾರಿಗೊಳಿಸಿವೆ: ಪುಟ್ಟಪ್ಪ
ರಾಣೇಬೆನ್ನೂರು 07: ಸರ್ಕಾರಿ ಶಾಲೆಗೆ ಬರುವ ಮಕ್ಕಳು ಆರ್ಥಿಕವಾಗಿ ಬಹಳಷ್ಟು ತೊಂದರೆಯಲ್ಲಿ ಇರುತ್ತಾರೆ. ಈ ಮಕ್ಕಳೂ ಖಾಸಗಿ ಶಾಲೆಯಲ್ಲಿ ಕಲಿಯುವ ಸ್ಥಿತಿವಂತರ ಮಕ್ಕಳ ಹಾಗೆಯೇ ಕಲಿಕೆಗೆ ಯಾವ ತೊಂದರೆ ಆಗಬಾರದು ಎಂದು ಸರ್ಕಾರವು ಅನೇಕ ಪ್ರೋತ್ಸಾಹಕರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು. ಅವರು ಇಲ್ಲಿನ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನಂ: 17 ರಲ್ಲಿ ನಡೆದ, ಸಾಕ್ಸ್ ಮತ್ತು ಶೂ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರಕಾರ ಜನಸಾಮಾನ್ಯರಿಗಾಗಿ ಮತ್ತು ಬಡತನದ ಮಕ್ಕಳಿಗಾಗಿ, ಶಿಕ್ಷಣ, ವಸತಿ, ಊಟ ಉಪಹಾರ ಸೇರಿದಂತೆ ಅನೇಕ ಯೋಜನೆಗಳನ್ನೂ ಜಾರಿಗೆ ತಂದು ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ತನ್ನ ಕರ್ತವ್ಯವನ್ನು ಮಾಡುತ್ತಿದೆ ಇದರ ಪ್ರಯೋಜನ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ಪರಿಪೂರ್ಣ ಶಿಕ್ಷಣವಂತರಾಗಬೇಕು ಎಂದು ಕರೆ ನೀಡಿದರು.ಮುಖ್ಯೋಪಾಧ್ಯಾಯ ಬಿ. ಪಿ. ಶಿಡೇನೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರ ವಿವಿಧ ಯೋಜನೆಗಳನ್ನು ಪ್ರೋತ್ಸಾಹಕರವಾಗಿ ಜಾರಿಗೊಳಿಸಿವೆ ಅವುಗಳ ಪ್ರಯೋಜನವನ್ನು ಪಡೆಯಲು ಮುಂದಾಗಬೇಕು ಎಂದರು. ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಗಾಯಿತ್ರಮ್ಮ ಕ್ಯಾದಿಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಯಲ್ಲಪ್ಪ ಛತ್ರದ, ಆನಂದ ಚಿನ್ನಿಕಟ್ಟಿ, ನಿವೃತ್ತ ಅಭಿಯಂತ ನಾಗರಾಜ ಬಣಕಾರ, ಶಿಕ್ಷಕರಾದ ಕೆ.ಎಸ್. ಮ್ಯಾಗೇರಿ, ಪ್ರತಿಭಾ ಮೈಲಾರ ಕಳ್ಳಿಮಠ, ಶ್ವೇತಾ ಹೆಚ್ ವ್ಹಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಅರ್. ಬಿ. ಚಲವಾದಿ ನಿರೂಪಿಸಿ ಶಿಕ್ಷಕಿ ವನಜಾಕ್ಷಿ ಪಾಟೀಲ ವಂದಿಸಿದರು.