ಕಾಗವಾಡ

ಸರಕಾರ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಒಂದು ಹೆಜ್ಜೆ ಮುಂದಿದೆ: ಪಾಟೀಲ

ಸರಕಾರ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಒಂದು ಹೆಜ್ಜೆ ಮುಂದಿದೆ: ಪಾಟೀಲ

ಲೋಕದರ್ಶನ ವರದಿ 


ಕಾಗವಾಡ 11: ಸಮಾಜದಲ್ಲಿ ಪ್ರತಿಯೊಂದು ಕುಟುಂಬದವರು ತಮ್ಮ ಹೆಣ್ಣುಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವ ಜವಾಬ್ದಾರಿ ಹೊಂದಬೇಕು. ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದು ಸ್ಥಾನಮಾನ ಗಿಟ್ಟಿಸಿಕೊಳ್ಳುತ್ತಾರೆ. ಇದಕ್ಕೆ ರಾಜ್ಯ ಸರಕಾರ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಒಂದು ಹೆಜ್ಜೆ ಮುಂದಾಗಿದೆಯೆಂದು ಬಿಜೆಪಿ ಪಕ್ಷದ ಮುಖಂಡರು, ಅಥಣಿ ಸಕ್ಕರೆ ಕಾರ್ಖಾನೆ ಎಂ.ಡಿ ಶ್ರೀನಿವಾಸ ಪಾಟೀಲ ಹೇಳಿದರು. 

ಸೋಮವಾರ ರಂದು ಕಾಗವಾಡದಲ್ಲಿ ಮಾಳಿ ಸಮಾಜ ಸೇವಾ ಸಂಘದ ವತಿಯಿಂದ ಮಹಾತ್ಮಾ ಜ್ಯೋತಿಬಾ ಫುಲೆಯವರ ಜಯಂತಿ ಆಚರಿಸಿದರು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಪಾಟೀಲ ಮಾತನಾಡಿದರು. 

ಸಮಾರಂಭದ ಅಧ್ಯಕ್ಷತೆ ಕರ್ನಾಟಕ ರಾಜ್ಯ ಮಾಳಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅನೀಲ ಲಿಂಬಿಗಿಡಯವರು ವಹಿಸಿದ್ದರು. ಮುಖ್ಯ ಸಾನ್ನಿಧ್ಯ ಶ್ರೀರಾಮ ಆಶ್ರಮ, ನಿಪ್ನಾಳ ಗ್ರಾಮದ ಪ್ರಭುಜೀ ಮಹಾರಾಜ ವಹಿಸಿದ್ದರು. 

ಮಾಳಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಅನೀಲ ಲಿಂಬಿಗಿಡ ಇವರು ಮಾತನಾಡುವಾಗ, ಮಾಳಿ ಸಮಾಜದ ಬೇರೆ-ಬೇರೆ ಬೇಡಿಕೆಗಳಿದ್ದು, ರಾಜ್ಯ ಸರಕಾರದ ಮುಂದೆ ಮಂಡಿಸಲಾಗಿದೆ. ಆದರೆ, ಯಾವ ಬೇಡಿಕೆಗಳು ಈಡೆಯರಿಸಲಿಲ್ಲಾ. ನಮ್ಮ ಬೇಡಿಕೆಗಳು ಈಡೆಯರಿಸಿ ಮಾಳಿ ಸಮಾಜಕ್ಕೆ ನ್ಯಾಯವದಿಗಿಸಿರಿ. ಸಮಾಜದ ಯುವತಿಯರಿಗೆ ಉನ್ನತ ಶಿಕ್ಷಣ ನೀಡಿ ಸ್ಥಾನಮಾನ ನೀಡಬೇಕೆಂದು ಕೇಳಿಕೊಂಡರು. 

ಮುಖ್ಯ ಅತಿಥಿಗಳಾಗಿ ಕಾಗವಾಡ ನ್ಯಾಯವಾದಿ ಸಂಘದ ಅಧ್ಯಕ್ಷ ವೈ.ಬಿ.ಯಡೂರೆ, ಕಾಗವಾಡ ಯುವತಿ ಮಂಡಳದ ಅಧ್ಯಕ್ಷೆ ಜಯಶ್ರೀ ಪಟವರ್ಧನ, ಸುನೀತಾ ಸುನೀಲ ಕೋರೆ, ಅರುಣ ಜೋಶಿ, ಸುಭಾಷ ಕಠಾರೆ, ಪ್ರಕಾಶ ಚೌಗುಲೆ, ನ್ಯಾಯವಾದಿ ಕಾಕಾ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಅನೀಲ ಕೋರೆ, ಸೇರಿದಂತೆ ಅನೇಕರು ಇದ್ದರು. ಮಾರುತಿ ಕನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. 


ಸುದ್ದಿ ಓದಿ