ಸರಕಾರಿ ನೌಕರರು ಸರ್ಕಾರ ಯೋಜನೆಗಳನ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಮಾಡಿ: ಪಾಟೀಲ
ಇಂಡಿ: ಸರಕಾರದಲ್ಲಿ ತೀರ್ಮಾನಾಗೊಂಡ ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಸರಕಾರಿ ನೌಕರದ್ದಾಗಿದ್ದು ನೌಕರರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಶಂಕರ-ಪಾರ್ವತಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು, ಶಾಖೆ ಇಂಡಿ ವತಿಯಿಂದ ಹಮ್ಮಿಕೊಂಡ ಸರಕಾರಿ ನೌಕರರ ನೂತನ ಸಭಾಭವನ ಉದ್ಘಾಟನೆ ಹಾಗೂ ಅನುಪಮ ಸೇವಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸರಕಾರಿ ನೌಕರರೊಂದಿಗೆ ನಾನು ಯಾವತ್ತೂ ಇದ್ದೇನೆ. ನೌಕರರ ಭವನ ನಿರ್ಮಾಣಕ್ಕೆ ನನ್ನ ಅನುದಾನದಲ್ಲಿ ಸಹಾಯ ಮಾಡಿದ್ದೇನೆ. ಎಲ್ಲ ನೌಕರರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಮಾಡಬೇಕೆಂದರು.
ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ ಬರುವ ಬಜೆಟ್ನಲ್ಲಿ ಕೇಂದ್ರ ಸರಕಾರಿ ನೌಕರರ ಸರಿ-ಸಮಾನ ವೇತನ ನೀಡಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಮಾಜ ಮುಖ್ಯಮಂತ್ರಿಗಳಾದ ಯಡಿಯೂರ್ಪನವರಿಗೂ ಮುಖ್ಯಮಂತ್ರಿಗಳಿಗೆ ಸಮಾನ ವೇತನ ನೀಡುವಂತೆ ಒತ್ತಾಯಿಸಲಾಗಿದೆ. ಈ ಬಜೆಟ್ನಲ್ಲಿ ಸರಿಸಮಾನ ವೇತನ ಜಾರಿ ಮಾಡಬೇಕು ಇಲ್ಲವಾದರೆ ಹೋರಾಟದ ಹಾದಿ ಹಿಡಿಯಬೇಕಾಗಿರುವುದು ಅನಿವಾರ್ಯವಾಗಿದೆ. ಒಂದು ವೇಳೆ ಹೋರಾಟಕ್ಕಿಳಿದರೆ ಎಲ್ಲ ನೌಕರ ಬಾಂಧವರು ನಮಗೆ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಸರಕಾರ ಎನ್ಪಿಎಸ್ ರದ್ದುಪಡಿಸಿ ಓಪಿಎಸ್ ಪ್ರಾರಂಭಿಸಬೇಕೆಂದು ಈಗಾಗಲೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ದೇಶದ ಯಾವ ರಾಜ್ಯದಲ್ಲೂ ಸರಕಾರಿ ನೌಕರರಿಗೆ ಕಳೆದ ಎರಡು ವರ್ಷಗಳಿಂದ ಸಂಪೂರ್ಣ ವೇತನ ನೀಡಿಲ್ಲ. ವೇತನದಲ್ಲಿ 20 ರಿಂದ 30 ಪ್ರತಿಶತ ವೇತನ ಕಡಿತಗೊಳಿಸಿ ಕರೋನ ನಿಧಿಗೆ ವರ್ಗಾಯಿಸಲಾಗುತ್ತಿದೆ. ಆದರೆ ನಮ್ಮ ಸಂಘಟನೆಯ ವತಿಯಿಂದ ಸರಕಾರದ ಗಮನ ಸೆಳೆದು ವೇತನ ಕಡಿತಗೊಳಿಸದಂತೆ ಮನವಿ ಮಾಡಿದ ಪ್ರಯುಕ್ತ ನಮ್ಮ ಸರಕಾರಿ ನೌಕರರ ವೇತನದಲ್ಲಿ ಕಡಿತವಾಗಿಲ್ಲ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ನೌಕರರೆಲ್ಲ ಒಂದಾಗಿ ಹೋರಾಟಕ್ಕಿಳಿಯಬೇಕು. ನಮ್ಮಲ್ಲಿ ಸಂಘಟನಾ ಕೊರತೆ ಕಂಡರೆ ಸರಕಾರ ನಮ್ಮನ್ನು ಒಡೆದಾಳುತ್ತದೆ. ಹೀಗಾಗಿ ನಮ್ಮ ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣ ಮಾಡೋಣ ಮುಗಿದ ಮೇಲೆ ಎಲ್ಲರೂ ಒಗ್ಗಟ್ಟಾಗಿರೋಣ ಎಂದರು.
ನೌಕರರ ಸಂಘದ ತಾಲೂಕಾ ಅಧ್ಯಕ್ಷ ಎಸ್.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ನೌಕರರ ಸಮಸ್ಯೆಗಳ ಕುರಿತು ರಾಜ್ಯಾಧ್ಯಕ್ಷರ ಹಾಗೂ ಶಾಸಕರ ಗಮನ ಸೆಳೆದರು.
ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ, ರಾಜಶೇಖರ ದೈವಾಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯಲ್ಲಿ ಪ್ರಾಮಣಿಕವಾಗಿ ಸೇವೆ ಸಲ್ಲಿಸಿದ 30 ಜನರಿಗೆ ಅನುಪಮ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಲ್ಲಿಕಾರ್ಜುನ ಬಳ್ಳಾರಿ, ಮೋಹನ್ಕುಮಾರ್ ಕೆ, ಸುನೀಲ ಮದ್ದಿನ್, ವಸಚಿತ್ ರಾಠೋಡ, ರಾಜಶೇಖರ ಬಳ್ಳಾರಿ, ಅರ್ಚನಾ ಕುಲಕರ್ಣಿ, ಜಗದೀಶ ಬೋಳಸೂರ, ಸೈಯದ್ ಕೆರೂರ, ವಿಜಯಕುಮಾರ ಹತ್ತಿ, ಆರ್.ಎಂ. ಮೇತ್ರಿ, ಗಂಗಾಧರ ಜೇವೂರ, ಆರ್.ಎಂ. ಮೇತ್ರಿ, ಬಿ.ಎಂ. ಅಂಜುಟಗಿ, ಬಿ.ವೈ ಬಬಲಾದ, ಬಿ.ಕೆ. ಗೋಟ್ಯಾಳ, ಮಹಾಂತೇಶ ನಾಯಿಕ್, ಬಸವರಾಜ ಗೊರನಾಳ, ಎಸ್.ಎಸ್. ತೆಲ್ಲೂರ ಮತ್ತಿತರರು ಇದ್ದರು.