ಸರಕಾರಿ ನೌಕರರಿಗೆ ಸನ್ಮಾನ
ಇಂಡಿ 30: ಇತ್ತೀಚೆಗೆ ಪಟ್ಟಣದ ಶಂಕರ-ಪಾರ್ವತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸರಕಾರಿ ನೌಕರರ ಸಮ್ಮೇಳನದಲ್ಲಿ “ಅನುಪಮ ಸೇವಾ ರತ್ನ” ಪ್ರಶಸ್ತಿ ಪಡೆದ ಸರಕಾರಿ ನೌಕರರಿಗೆ ಪಟ್ಟಣದ ವೀರರಾಣಿ ಕಿತ್ತೂರ ಚನ್ನಮ್ಮ ಸಹಕಾರಿ ಪತ್ತಿನ ಸಂಘದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಪ್ರಶಸ್ತಿ ಪಡೆದ ಐ.ಆರ್. ಬಿರಾದಾರ, ಎಂ.ಪಿ.ಬಿರಾದಾರ, ಗಂಗಾಧರ ಎಸ್ ಸಾಲೆಗಾಂವ, ಸುನಿಲ ಪಾಟೀಲ, ರಮೇಶ ಮುಂಜಣ್ಣಿ ಅವರ ಜೊತೆಗೆ ಸರಕಾರಿ ನೌಕರರ ಸಂಘದ ನೂತನ ತಾಲೂಕಾ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಡಿ. ಪಾಟೀಲ ಅವರನ್ನು ಸತ್ಕರಿಸಲಾಯಿತು.
ಸತ್ಕಾರ ಸಮಾರಂಭದ ವೇದಿಕೆಯಲ್ಲಿ ಸಿ.ಎಸ್. ಹಕಾರಿ, ಕಾಂತು ಇಂಡಿ, ಜಿ.ಜಿ. ಬರಡೊಲ, ಎ.ಎಸ್. ನಾಗಣಿ, ಎಸ್.ಬಿ. ಕಲ್ಲೋಳಿ, ಬಸವರಾಜ ಗೊರನಾಳ, ಎಸ್.ಎಸ್. ಸ್ವಾಮಿ ಸೇರಿದಂತೆ ಅನೇಕರು ಇದ್ದರು.