ಬೈಲಹೊಂಗಲ

ಸರ್ಕಾರದ ಕ್ರಮ ಸ್ವಾಗತಾರ್ಹ: ಮೆಟಗುಡ್ಡ

ಸರ್ಕಾರದ ಕ್ರಮ ಸ್ವಾಗತಾರ್ಹ: ಮೆಟಗುಡ್ಡ

ಲೋಕದರ್ಶನ ವರದಿ 


ಬೈಲಹೊಂಗಲ 10: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವನ್ನಾಗಿ ಘೋಷಣೆ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಆದೇಶ ಹೊರಡಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದು  ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು. 

      ಅವರು ಮಂಗಳವಾರ ಬಿಜೆಪಿ ಮಂಡಲ ವತಿಯಿಂದ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸಮಾಧಿಗೆ ಗೌರವ ಸಮರ​‍್ಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. 

 ಬಿಜೆಪಿ ಮಂಡಲ ಉಪಾಧ್ಯಕ್ಷ ಸುಭಾಷ ತುರಮರಿ ಮಾತನಾಡಿ, ಉತ್ತರ ಕರ್ನಾಟಕ ಜನತೆಯ ಬಹು ದಿನಗಳ ಕನಸು ಮುಖ್ಯಮಂತ್ರಿ ಈಡೇರಿಸಿದ್ದು ಕಿತ್ತೂರು ನಾಡಿಗೆ ಸಂತೋಷದ ಸಂಗತಿಯಾಗಿದ್ದು, ವಿಶೇಷ ಪ್ಯಾಕೇಜ ನೀಡಿ ಅಭಿವೃದ್ದಿಗೆ ಒತ್ತು ನೀಡಬೇಕು ಎಂದರು. 

       ಬಿಜೆಪಿ ಮುಖಂಡ ಗುರುಪಾದ ಕಳ್ಳಿ, ಜಿಲ್ಲಾ ಕಾರ್ಯದರ್ಶಿ ಪುರಸಭೆ ಸದಸ್ಯ, ಗುರು ಮೆಟಗುಡ್ಡ, ಜಗದೀಶ ಬೂದಿಹಾಳ, ಸಂತೋಷ ಹಡಪದ, ಸಚಿನ್ ಕಡಿ, ಈರಣ್ಣ ಬಿಡಿ, ಲಕ್ಕಪ್ಪ ಕಾರಗಿ, ದಯಾನಂದ ಪರಾಳಶೆಟ್ಟರ, ಶಾಂತಿನಾಥ ದಿಬ್ಬದ, ಬಸವರಾಜ ಯಾಸನ್ನವರ, ಬಸವರಾಜ ಪೂಜಾರ, ಸದಾಶಿವ ಪಾಟೀಲ, ರಾಜು ಕಡಕೋಳ, ರವಿ ಸವಟಗಿ, ಅಜಯ ಭಜಂತ್ರಿ, ಗೌಡಪ್ಪ ಹೊಸಮನಿ, ವೆಂಕಟೇಶ ದಾಸೋಗ, ಗುರುಪಾದ  ಅಂಗಡಿ, ಚೆನ್ನಮ್ಮ ಯಡಳ್ಳಿ, ರತ್ನಾ ಗೋಧಿ, ರೂಪಾ ಜಮಖಂಡಿ, ಅಶ್ವಿನಿ ಮಾರಿಹಾಳ, ಶ್ವೇತಾ ಕೊರವಿಕೊಪ್ಪ ಅನೇಕ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ