ಸರ್ಕಾರ ಸಕಾರಾತ್ಮಕ ಸ್ಪಂದನೆ: ಸಿಹಿ ಹಂಚಿದ ಸಂಭ್ರಮ
ಅಥಣಿ- ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆಗೆ ಸರ್ಕಾರ ಸಕಾರಾತ್ಮಕ ಸ್ಪಂದನೆ ಹಿನ್ನೆಲೆ ಬಸವ ಜಯಮೃತ್ಯುಂಜಯ ಜಗದ್ಗುರುಗಳಿಗೆ ಅಥಣಿ ಕಾಂಗ್ರೆಸ್ ಯುವ ಮುಖಂಡ ಧರೇಪ್ಪ ಟಕ್ಕಣ್ಣವರ್ ಸಿಹಿ ಹಂಚಿದ ಸಂಭ್ರಮಿಸಿದರು.ಕಳೆದ 26 ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಪಂಚಮಸಾಲಿ ಸಮಾಜದ ಸರ್ಕಾರ ಮುಂದೆ ಹಲವಾರು ಬಾರಿ ಪ್ರತಿಭಟನೆ ಮನವಿ ಸಲ್ಲಿಸಲಾಯಿತು. ಕಳೆದ ಎರಡು ತಿಂಗಳ ಪ್ರತಿಭಟನೆ ಸ್ವರೂಪ ಹೆಚ್ಚಾಗುತ್ತಿದ್ದು, ಜಯಮೃತ್ಯುಂಜಯ ಸ್ವಾಮಿಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಎರಡು ತಿಂಗಳಿಂದ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಕೋಣೆಗು ಎಚ್ಚೆತ್ತುಕೊಂಡ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ ನವರ ಭರವಸೆ ನೀಡಿದ್ದಾರೆ. ಪಂಚಮಸಾಲಿ ಸಮಾಜದ ಸರ್ಕಾರ ನಡೆಯನ್ನು ಸ್ವಾಗತಿಸಿ, ಅಥಣಿ ಪಂಚಮಸಾಲಿ ಸಮಾಜದ ಮುಖಂಡ ಧರೇಪ್ಪ ಟಕ್ಕಣ್ಣವರ್ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಜಿ ಅವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.