ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಅರುಣ್ ಕುಮಾರ್ ಚಂದನ್‌ಗೆ ಅವಾರ್ಡ್
ರಾಣೆಬೆನ್ನೂರು 20: ಇಲ್ಲಿನ ಹುಣಸಿಕಟ್ಟಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಡಾ: ಅರುಣ್ ಕುಮಾರ್ ಚಂದನ್ ಅವರು" ಅವಾರ್ಡ್ ಫಾರ್ ಕಾಂಟ್ರಿಬ್ಯೂಷ್ ನ್ಸ್, ಟು ಕಮ್ಯುನಿಟಿ " ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಮಹಾಸಮ್ಮೇಳನದಲ್ಲಿ, ಚಂದನ್ ಅವರಿಗೆ,ಸಾರ್ವಜನಿಕವಾಗಿ ಜರುಗಿದ ಭವ್ಯ ಸಮಾರಂಭದಲ್ಲಿ ಈ ಪ್ರತಿಷ್ಠಿತ ಸೇವಾ ಪ್ರಶಸ್ತಿಯನ್ನು ಗಣ್ಯರು ವಿತರಿಸಿ ಗೌರವಿಸಿದರು. ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕಳೆದ ಹದಿನೈದು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಅರುಣ್ ಕುಮಾರ್ ಅವರು, ಎನ್‌ಎಸ್‌ಎಸ್ ಅಧಿಕಾರಿಯಾಗಿ ಮತ್ತು ಸಂಘ ಸಂಸ್ಥೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿ, ಕೋವಿಡ್ ಸಂದರ್ಭದಲ್ಲಿ ವಾರಿಯರ್ ಮತ್ತು ಉತ್ತರ ಕರ್ನಾಟಕದ ಪ್ರವಾಹ ಪರಿಹಾರ ಸಾಮಗ್ರಿ ವಿತರಣೆ ಟಾಸ್ಕ್ ಫೋರ್ಸ್ ಸಂಯೋಜಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಕೈಟ್ಸ್ ಕ್ರಾಫ್ಟ್ ಹಾಗೂ ಮೆಂಟೋರ್ ಎಕ್ಸ್ ಮತ್ತಿತರ ಸಂಸ್ಥೆಗಳು ಸೇರಿ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಪುರಸ್ಕೃತ ಅರುಣ್ ಕುಮಾರ್ ಚಂದನ್ ಅವರಿಗೆ, ಸ್ಥಳೀಯ ಮತ್ತು ಜಿಲ್ಲೆಯ ಅನೇಕ ಸಂಘ-ಸಂಸ್ಥೆಗಳು, ಗಣ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.