ಕಾಗವಾಡ

ಬಡ ಕುಟುಂಬಗಳ ಉದ್ಯೋಗಾವಕಾಶಕ್ಕೆ ಅನುವು ಸರಕಾರದ ಉದ್ದೇಶ :ನಿಪ್ಪಾಣಿಯ ನಗರಸಭೆ ಸಂಪನ್ಮೂಲ ವ್ಯಕ್ತಿ ಸಂಪತರಾವ ಕುರಣೆ ಹೇಳಿಕೆ: ವಿವಿಧ ಸ್ವ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಬಡ ಕುಟುಂಬಗಳ ಉದ್ಯೋಗಾವಕಾಶಕ್ಕೆ ಅನುವು ಸರಕಾರದ ಉದ್ದೇಶ :ನಿಪ್ಪಾಣಿಯ ನಗರಸಭೆ ಸಂಪನ್ಮೂಲ ವ್ಯಕ್ತಿ ಸಂಪತರಾವ ಕುರಣೆ ಹೇಳಿಕೆ: ವಿವಿಧ ಸ್ವ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ 

ಕಾಗವಾಡ 09: ನಗರ ಪ್ರದೇಶದ ಬಡ ಕುಟುಂಬಗಳ ಬಡತನ ಮತ್ತು ದುರ್ಬಲತೆಯನ್ನು ಕಡಿಮೆ ಮಾಡಲು ಅವರಿಗೆ ಲಾಭದಾಯಕ ಸ್ವಯಂ ಉದ್ಯೋಗ ಮತ್ತು ಕೌಶಲ್ಯಪೂರ್ಣ ವೇತನ ಉದ್ಯೋಗಾವಕಾಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವುದು, ಸರಕಾರದ ಉದ್ದೇಶವಾಗಿದೆ ಎಂದು ವಿವಿಧ ಸಾಮಥ್ಯರ್ ಅಭಿವೃದ್ಧಿ ತರಬೇತಿ ಕೇಂದ್ರದ ನಿಪ್ಪಾಣಿಯ ನಗರಸಭೆಯ ಸಂಪನ್ಮೂಲ ವ್ಯಕ್ತಿ ಸಂಪತರಾವ ಕುರಣೆ ಹೇಳಿದರು. 

ಬುಧವಾರ ದಿ. 9ರಂದು ಶೇಡಬಾಳದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಮ್‌.ಎಸ್‌. ಕೌಲಾಪೂರ ಇವರ ಅದ್ಯಕ್ಷತೆಯಲ್ಲಿ ಶೇಡಬಾಳದ ಸನ್ಮತಿ ವಿದ್ಯಾಲಯದ ಸಾಂಸ್ಕತಿಕ ಭವನದಲ್ಲಿ  ಡೇ-ನಲ್ಮ್‌ ಯೋಜನೆಯಡಿ ಸಾಮಾಜಿಕ ಕ್ರೋಢಿಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ ಸ್ವ- ಸಹಾಯ ಸಂಘ ಮತ್ತು ಪ್ರದೇಶ ಮಟ್ಟದ ಒಕ್ಕೂಟಗಳಿಗೆ 02 ದಿನದ ವಿವಿಧ ಸ್ವ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಉಪನ್ಯಾಸಕರಾಗಿ ಸಂಪತರಾವ ಕುರಣೆ (ನಿಪ್ಪಾಣಿ), ಅಥಣಿ ಪುರಸಭೆ ಸಮುದಾಯ ಸಂಘಟನಾಧಿಕಾರಿ ಎ.ಎಲ್‌.ನದಾಫ, ಕಾಗವಾಡದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್‌.ಆರ್‌.ಪಾಟೀಲ್, ಇವರು ತರಬೇತಿ ನೀಡುವಾಗ ಬಡವರ ತಳಮಟ್ಟದ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಸಮರ್ಥನೀಯ ಆಧಾರದ ಮೇಲೆ ಅವರ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗುತ್ತದೆ. ನಗರ ಪ್ರದೇಶದ ನಿರಾಶ್ರಿತರಿಗೆ ಹಂತಹಂತವಾಗಿ ಅಗತ್ಯ ಸೇವೆಗಳನ್ನು ಹೊಂದಿರುವ ಆಶ್ರಯವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು.  

ಇದೆ ರೀತಿ ಜೊತೆಗೆ, ನಗರ ಬೀದಿಗೆ ಸೂಕ್ತವಾದ ಸ್ಥಳಗಳು, ಸಾಂಸ್ಥಿಕ ಸಾಲ, ಸಾಮಾಜಿಕ ಭದ್ರತೆ ಮತ್ತು ಕೌಶಲ್ಯಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ನಗರ ಬೀದಿ ವ್ಯಾಪಾರಿಗಳ ಜೀವನೋಪಾಯದ ಕಾಳಜಿಯನ್ನು ಈ ಮಿಷನ್ ಪರಿಹರಿಸುತ್ತದೆ. ಉದಯೋನ್ಮುಖ ಮಾರುಕಟ್ಟೆ ಅವಕಾಶಗಳನ್ನು ಪ್ರವೇಶಿಸಲು ಮಾರಾಟಗಾರರಿಗೆ ಅವಕಾಶ ಕಲ್ಪಿಸುತ್ತದೆ ಎಂದರು. 

ಮಂಗಸೂಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿ.ಎಚ್‌ಓ. ಡಾ. ದೀಪಾ ಎಮ್‌.ಪಿ. ಇವರು ಶೇಡಬಾಳ ಸ್ಟೇಷನ ಪದ್ಮಾವತಿ ಮಹಿಳಾ ಮಂಡಳ ಸದ್ಯಸರು, ಸ್ವ-ಸಹಾಯ ಸಂಘ, ಅಂಗಣವಾಡಿ, ಆಶಾ ಕಾರ್ಯಕ್ರತರಿಗೆ ತರಬೇತಿ ನೀಡಿದರು. ಶೇಡಬಾಳ ಪ.ಪಂ. ಸಿಬಂದಿ ಅಶೋಕ ತೀರ್ಥ, ಸುಧಿರ ಮಾಳಾಪ್ಪಗೊಳ, ಎ.ಕೆ. ಪಾಟೀಲ(ಸರ್) ಕಾರ್ಯಕ್ರಮ ಯಶಸ್ವಿಗೊಳಿಸಿದರು. 


ಸುದ್ದಿ ಓದಿ